ವಿಕ್ರಮಶಿಲ ಗಂಗಾ ಡಾಲ್ಫಿನ್ ಅಭಯಧಾಮದ ಪ್ರಮುಖ ಆಕರ್ಷಣೆಯೆಂದರೆ ಸೋನ್ಸ್ ಎಂದು ಸ್ಥಳೀಯರಿಂದ ಕರೆಯಲ್ಪಡುವ ಗಂಗಾ ಡಾಲ್ಫಿನ್ ಗಳು. ಇವುಗಳನ್ನು ವಿನಾಶದ ಅಂಚಿನಲ್ಲಿರುವ ಪ್ರಾಣಿಗಳು ಎಂದು ಘೋಷಿಸಲಾಗಿದೆ. ಈ ಅಭಯಧಾಮವು ವಿನಾಶದ ಅಂಚಿನಲ್ಲಿರುವ ಇತರ ಜಲಚರಗಳಾದ ಸಿಹಿನೀರಿನಲ್ಲಿರುವ ಆಮೆ ಹಾಗೂ ಇತರ 135 ವಿಧದ ಜಲಚರಗಳ ಸುರಕ್ಷಿತ ತಾಣವಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಜೂನ್ ವರೆಗಿನ ಸಮಯವೂ ಉತ್ತಮ.