Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾ » ಹವಾಮಾನ

ಭದ್ರಾ ಹವಾಮಾನ

ಭದ್ರಾ ಅರಣ್ಯಧಾಮಕ್ಕೆ ಮಾರ್ಚ್ ನಿಂದ ಜುಲೈ ಮತ್ತು ಸೆಪ್ಟೆಂಬರ್ ನಿಂದ ಅಕ್ಟೋಬರ್ ಸಮಯದಲ್ಲಿ ಪ್ರವಾಸಿಗರು ಭೇಟಿ ನೀಡಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆ ಕಾಲದಲ್ಲಿ ಸೆಖೆಯ ವಾತಾರವಣವಿರುವ ಭದ್ರಾ ಪ್ರದೇಶದಲ್ಲಿ ತಾಪಮಾನ ಹಗಲು ಹೊತ್ತಿನಲ್ಲಿ 32 ಡಿ.ಸೆ.ವರೆಗೂ ಏರಿರುತ್ತದೆ. ಈ ಸಮಯದಲ್ಲಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್ ): ಭದ್ರಾ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತದೆ. ದಕ್ಷಿಣ ಭಾರತದಲ್ಲೇ ಹೆಚ್ಚಿನ ಮಳೆಯೂ ಇಲ್ಲಿ ಆಗುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ಈ ಇಲ್ಲಿಗೆ ಭೇಟಿ ನೀಡದಿರುವುದೇ ವಾಸಿ ಎನ್ನಬಹುದು. ಯಾಕೆಂದರೆ ಒಡಾಡಲೂ ಕೂಡ ಮಳೆಗಾಲದಲ್ಲಿ ಆಗುವುದಿಲ್ಲ ಅಲ್ಲದೇ ಕಾಡಿನ ಸೌಂದರ್ಯ ಮತ್ತು ಕಾಡುಪ್ರಾಣಿಗಳನ್ನೂ ಕೂಡ ನೋಡಲು ಆಗುವುದಿಲ್ಲ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ಚಳಿಗಾಳ ಭದ್ರಾ ವನ್ಯಜೀವಿ ಅಭಯಾರಣ್ಯ ತಂಪಾದ ವಾತಾವರಣದಿಂದ ದೇಹಕ್ಕೆ ಹಿತಕರವಾಗಿರುತ್ತದೆ. ಈ ಸಮಯದಲ್ಲಿ ಕನಿಷ್ಠ ಉಷ್ಣಾಂಶ 10 ಡಿ.ಸೆ.ವರೆಗಿರುತ್ತದೆ. ಆದ್ದರಿಂದಲೇ ಪ್ರವಾಸಿಗರು ಈ ಸಮಯದಲ್ಲೇ  ಭದ್ರಾ ಅಭಯಾರಣ್ಯಕ್ಕೆ ಭೇಟಿ ನೀಡುತ್ತಾರೆ.