ಹೌಸ್ ಬೋಟ್ ಪ್ರಯಾಣ ಬೆಕಲ್ ನ ಇನ್ನೊಂದು ಪ್ರಮುಖ ಆಕರ್ಷಣೆ. ಮಲಬಾರ್ ತೀರದಲ್ಲಿರುವ, ತಾಳೆ (ಪಾಮ್) ಗಿಡ ಗಳಿಂದ ಸುತ್ತುವರಿದ ಪ್ರಶಾಂತವಾದ ಹಿನ್ನೀರಿನಲ್ಲಿ ನೀವು ಪ್ರಯಾಣವನ್ನು ಮಾಡಬಹುದು. ಈ ಸೌಂದರ್ಯವನ್ನು ಹೊರತು ಪಡಿಸಿ ಇಲ್ಲಿನ ಹೌಸ್ ಬೋಟ್ ನಲ್ಲಿ ನೀವು ಕಾಲ ಕಳೆಯಬಹುದು. ನೀವು ಈ ಹೌಸ್ ಬೋಟ್ ಗೆ ಒಮ್ಮೆ ಬಂದರೆ ನೀವು ನಿಮ್ಮೆಲ್ಲ ಒತ್ತಡದ ಬದುಕನ್ನು, ಸಮಸ್ಯೆಗಳನ್ನು ಮರೆತು ಹೊಸದೊಂದು ಅನುಭವವನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ನಿಮ್ಮ ಕುಟುಂಬದವರೊಂದಿಗೆ ರಜೆಯನ್ನು ಕಳೆಯಲು ಇದಕ್ಕಿಂತ ಉತ್ತಮವಾದ ಸ್ಥಳ ಮತ್ತೊಂದಿಲ್ಲ. ಈ ಹೌಸ್ ಬೋಟ್ ಗಳನ್ನು ಈಗಿನ ತಂತ್ರಜ್ಞಾನಗಳನ್ನು ಅಳವಡಿಸಿ ತಯಾರಿಸಲಾಗಿದ್ದು ನಿಮಗೆ ಆರಾಮದಾಯಕ ಎನಿಸುತ್ತದೆ. ಜೊತೆಗೆ ಇದು ವ್ಯಾಪಾರಿ ಮಾರ್ಗ ಕೂಡಾ.