ಅನಂತಪುರ ದೇವಾಲಯವು ಕೇರಳದಲ್ಲಿರುವ ಕೆರೆಯ ಮಧ್ಯದ ಏಕೈಕ ದೇವಾಲಯ. ಪುರಾಣದ ಪ್ರಕಾರ ಈ ದೇವಾಲಯವು ಅನಂತ ಪದ್ಮನಾಭ ಸ್ವಾಮಿಯ ಮೂಲ ಸ್ಥಾನ. ಈ ದೇವಾಲಯದ ಕೆರೆಯಲ್ಲಿ ಒಂದು ಮೊಸಳೆಯನ್ನು ಕಾಣಬಹುದು. ಅಲ್ಲದೇ ಇಲ್ಲಿನ ಮೊಸಳೆಯು ಮರಣ ಹೊಂದಿದರೆ ಅತ್ಯಾಶ್ಚರ್ಯ ಎಂಬಂತೆ ಇಲ್ಲಿ ಇನ್ನೊಂದು ಮೊಸಳೆ ಬಂದು ಸೇರುತ್ತದೆ. ಅನಂತಪುರ ದೇವಾಲಯವು 9ನೆ ಶತಮಾನದಲ್ಲಿಯೇ ಕಟ್ಟಲಾಯಿತು. ಬೆಕಲ್ ನಿಂದ 30 ಕೀ.ಮಿ ದೂರದಲ್ಲಿ ಅನಂತಪುರ ದೇವಾಲಯವನ್ನು ಕಾಣಬಹುದು. ಅನಂತಪುರದಲ್ಲಿನ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೇ ಎಲ್ಲಾ ಜನಾಂಗವೂ ಶ್ರೀ ದೇವರ ದರ್ಶನಕ್ಕೆ ಬರಬಹುದು. ಈ ದೇವಾಲಯವು ಅತ್ಯಂತ ವಿಸ್ತಾರವಾದ ಕೆರೆಯ ಮಧ್ಯದಲ್ಲಿ ನಿರ್ಮಿಸಲಾಗಿದೆ. 2 ಎಕರೆ ಜಾಗದಲ್ಲಿ 302 ಸ್ಕ್ವಾರ್ ಫೀಟ್ ವಿಸ್ತೀರ್ಣವನ್ನು ಹೊಂದಿದೆ.