ಬಾರಾ ಛತ್ತರ್ ಎಂದೂ ಕರೆಯಲ್ಪಡುವ ಬಾರಾಹ್/ಬಾರಾ ದೇವಾಲಯ, ಈ ಹೆಸರು ಬರಲು ಕಾರಣವಾದ ಬಾರಾಹ್ ಹಳ್ಳಿಯಲ್ಲಿದೆ. ಕುವಾನಾ ನದಿ ದಡದಲ್ಲಿರುವ ಬಸ್ತಿ ನಗರದಿಂದ 15 ಕಿ.ಮೀ ದೂರದಲ್ಲಿದೆ. ಈ ಪುರಾತನ ಹಳ್ಳಿಯ ಮೂಲ ಹೆಸರು ವಿಯಗ್ರಪುರಿ.
ಈ ಹಳ್ಳಿ ಮತ್ತು ಇಲ್ಲಿನ ದೇವಸ್ಥಾನವು ಪೌರಾಣಿಕ ಗ್ರಂಥಗಳಲ್ಲಿ ಮಹಾನ್ ಪೂಜ್ಯನೀಯ ಸ್ಥಳ ಎಂದು ಗುರುತಿಸಲ್ಪಟ್ಟಿದೆ. ಈ ದೇವಾಲಯದಲ್ಲಿ ಶಿವನನ್ನು ಪೂಜಿಸಲಾಗುತ್ತದೆ ಮತ್ತು ಶಿವಲಿಂಗದ ಆವಾಸ ಸ್ಥಾನವಾಗಿದೆ. ಶಿವನಿಗೆ ಸಂಬಂಧಿಸಿದ ಶಿವರಾತ್ರಿ ಹಾಗೂ ಇತರ ಉತ್ಸವಗಳಲ್ಲಿ ಆಸಕ್ತ ಭಕ್ತಾದಿಗಳು ಪೂಜೆಸಲ್ಲಿಸಲು ಇಲ್ಲಿಗೆ ಬರುತ್ತಾರೆ.