12 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಚಿಂತಾಮಣಿ ಪಾರಸನಾಥ್ ಜೈನ ಮಂದಿರ, ಜೈನ ತೀರ್ಥಂಕರ ಪಾರ್ಶ್ವನಾಥನಿಗೆ ಸಮರ್ಪಿತವಾಗಿದೆ. ಸದೃಢವಾಗಿ ನಿಂತಿರುವ ಈ ಮಂದಿರ ಗುಡ್ಡದ ತುದಿಯಲ್ಲಿದೆ. ಮಂದಿರದ ಒಳಾಂಗಣವು ಅಂದವಾದ ಕೆತ್ತನೆಗಳಿಂದ ಕೂಡಿದ್ದು ವರ್ಣಚಿತ್ರಗಳಿಂದ ಸಿಂಗರಿಸಲ್ಪಟ್ಟಿದೆ. ಇದಲ್ಲದೆ, ಒಳಗೋಡೆಗಳ ಮೇಲೆ ಅದ್ಭುತವಾದ ಗಾಜಿನ ಕೆತ್ತನೆಯ ಕೆಲಸವು, ರಚನೆಕಾರರ ಕೌಶಲ್ಯತೆಯನ್ನು ಪ್ರದರ್ಶಿಸುತ್ತದೆ.