Search
  • Follow NativePlanet
Share
ಮುಖಪುಟ » ಸ್ಥಳಗಳು» ಬರ್ಧಮಾನ್

ಬರ್ಧಮಾನ್ : ಐತಿಹಾಸಿಕ ನಗರ

15

ಬರ್ಧಮಾನ್ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತಾದಲ್ಲಿ  ಚಾಲನೆ ಮಾಡುವಷ್ಟು ಅಂತರದಲಿರುವ ಒಂದು ಪಟ್ಟಣವಾಗಿದೆ. ಇದರ ಇತಿಹಾಸ ಕ್ರಿ ಪೂ 6 ನೇ ಶತಮಾನದಿಂದಲೂ ಕಾಣಬಹುದು ಮತ್ತು ಇದು ಮಹಾವೀರನ ಜೈನ ಧರ್ಮ ಮತ್ತು ಬುದ್ಧನ ಬೌದ್ಧ ಧರ್ಮದ ಬೇರು ಹುಟ್ಟಿದ ನಗರ. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಮುಖ್ಯ ಕೇಂದ್ರವಾಗಿ ಕಾರ್ಯನಿರ್ವಹಿಸಿದೆ.

ನಗರದ ದೇವಾಲಯಗಳು

ಬರ್ಧಮಾನ್ ಪ್ರವಾಸೋದ್ಯಮಕ್ಕೆ ಈ ನಗರದಲ್ಲಿರುವ ಸಾಕಷ್ಟು ದೇವಾಲಯಗಳಿಂದ ಅನುಕೂಲವಾಗಿದೆ. ಇಲ್ಲಿನ ಅನೇಕ ದೇವಾಲಯಗಳಲ್ಲಿ ಬೆಂಗಾಲಿ ಹಿಂದೂ ಆಚರಣೆ ಕಾಣಬಹುದು. ಇಲ್ಲಿನ ಮುಖ್ಯ ದೇವಾಲಯವ ಎಂದರೆ ಸರ್ವಮಂಗಳ ದೇವಾಲಯ.

ಬರ್ಧಮಾನದ ಆಹಾರ ಪದ್ಧತಿ

ಕರ್ಜನ್ ಗೇಟ್ ಮತ್ತು ಮಹಾರಾಜ ಗೋಲಪ್ ಭಾಗ್ ನ ಉದ್ಯಾನವನವ ನೋಡಲೇಬೇಕಾದ ಸ್ಥಳವಾಗಿದೆ. ಈ ಸ್ಥಳಗಳಲ್ಲಿ ಮೊಘಲ್ ಶೈಲಿ ಹೊಂದಿರುವ ಬೆಂಗಾಲಿ ಅತ್ಯುತ್ತಮ ಆಹಾರ ಪದ್ಧತಿಯನ್ನು ಸವಿಯಬಹುದು. ಸೀತಾಭೋಗ್ ಮತ್ತು ಮಿಹಿದಾನಾ ಎಂಬ ಈ ಎರಡು ಸಿಹಿ ತಿಂಡಿಗಳು ಬರ್ಧಮಾನ ಮತ್ತು ರಾಜ್ಯದ ಇತರ ನಗರಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವ ಮತ್ತು ಹೆಚ್ಚು ಮಾರಾಟವಾಗುವ ಸಿಹಿ ತಿನಿಸುಗಳು. ಈ ಬೀದಿಯ ಇನ್ನೊಂದು ಬದಿಗೆ ಹೋದರೆ ಬೆಂಗಾಳಿಯಲ್ಲಿ ಹೆಸರುವಾಸಿಯಾಗಿರುವ ಮೀನಿನ ವಿವಿಧ ಖಾದ್ಯಗಳನ್ನು ಸವಿಯಬಹುದು.

ಹಬ್ಬಗಳು

ಬರ್ಧಮಾನಿನ ಸ್ಥಳೀಯರು ಮೋಜು ಪ್ರಿಯರು ಮತ್ತು ಇಲ್ಲಿ ಮುಖ್ಯ ಹಬ್ಬಗಳಾದ ಹೋಳಿ,ದೀಪಾವಳಿ ಮತ್ತು ಹೊಸವರ್ಷದ ಸಂದರ್ಭದಲ್ಲಿ ಸುಂದರವಾಗಿ ಶೃಂಗರಿಸಿ ಹಬ್ಬ ಆಚರಿಸಲಾಗುತ್ತದೆ. ದೀಪಾವಳಿಯ ಮೊದಲು ಬರುವ ದುರ್ಗಾ ಪೂಜೆ ಮತ್ತು ದಸರಾ ಹಬ್ಬವನ್ನು ಕೂಡ ಅತ್ಯಂತ ಸುಂದರವಾಗಿ ಆಚರಿಸಲಾಗುತ್ತದೆ. ಬೆಂಗಾಲಿಗಳು ಕಾಳಿ ಮತ್ತು ದುರ್ಗಾ ಪೂಜೆಯನ್ನು ಹೆಚ್ಚು ಪ್ರಾಮುಖ್ಯತೆ ನೀಡಿ ಆಚರಿಸುತ್ತಾರೆ. ಈ ಸಮಯದಲ್ಲಿ ಇಲ್ಲಿನ ಆಹಾರ ಮತ್ತು ನಗರ ವೈಭವವನ್ನು ನೋಡಲೇಬೇಕು.

ಶೈಕ್ಷಣಿಕ ಹಬ್

60 ರ ದಶಕದಲ್ಲಿ ಬರ್ಧಮಾನದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲಾಯಿತು ಮತ್ತು ರಾಜ್ಯದ ಇತರ ನಗರಗಳಿಂದ ಒಳ್ಳೆಯ ಶಿಕ್ಷಣಕ್ಕಾಗಿ ಬರ್ಧಮಾನಕ್ಕೆ ಜನರು ಬರುತ್ತಿದ್ದರು. ಬರ್ಧಮಾನದಲ್ಲಿ ಕೆಲವು ಪ್ರಮುಖ ವಿಜ್ಞಾನ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯವನ್ನು ಕಾಣಬಹುದು.

ಬರ್ಧಮಾನ ಮತ್ತು ಹತ್ತಿರದ ಪ್ರವಾಸಿ ಕೇಂದ್ರಗಳು

ಬರ್ಧಮಾನಕ್ಕೆ ಪ್ರವಾಸ ಕೈಗೊಂಡಾಗ ನಿಮಗೆ ಬಿಡುವಿನ ಸಮಯವಿದ್ದರೆ ನವಾಬ್ ಹಟ್ ಅನ್ನು ಭೇಟಿ ನೀಡಲು ಮರೆಯಬೇಡಿ. ಇಲ್ಲಿ 108 ಶಿವ ಲಿಂಗಗಳನ್ನು ಹೊಂದಿದ ದೇವಾಲಯವಿದ್ದು ಮಹಾಶಿವರಾತ್ರಿಯನ್ನು ಅತ್ಯಂತ ವೈಭವಯುತವಾಗಿ ಆಚರಿಸಲಾಗುತ್ತದೆ. ಬರ್ಧಮಾನ ಪ್ರವಾಸಿಗರಿಗೆ ವಿಶೇಷ ಸ್ಥಳ ನೀಡುವ ಭರವಸೆ ಮೂಡಿಸುತ್ತದೆ.

ಅದು ಆಫ್ಘಾನ್ ಶೇರ್ ಸಮಾಧಿ ಆಗಿರಬಹುದು ಅಥವಾ ರಮಣ ಬಂಗನ್ ಅರಣ್ಯ ಕಚೇರಿ ಆಗಿರಬಹುದು ಇದು ಪ್ರವಾಸಿಗರಿಗೆ ಆಸಕ್ತಿ ಮೂಡಿಸುವುದು ಖಂಡಿತ. ಕೊಲ್ಕತ್ತಾಗೆ ಭೇಟಿ ನೀಡಿದವರಿಗೆ ಇಲ್ಲಿ ಪ್ರವಾಸ ಕೈಗೊಂಡರೆ ಒಂದು ಒಳ್ಳೆಯ ಟ್ರಿಪ್ ಆಗುವುದು ಖಂಡಿತ.

ಬರ್ಧಮಾನ ತಲುಪುವ ಮಾರ್ಗ

ಬರ್ಧಮಾನ ಪ್ರಖ್ಯಾತ ಸ್ಥಳವಾಗಿದ್ದು ಇದನ್ನು ರಸ್ತೆ, ರೈಲು ಮತ್ತು ವಿಮಾನ ಮಾರ್ಗವಾಗಿ ಸುಲಭವಾಗಿ ತಲುಪಬಹುದು.

ಬರ್ಧಮಾನ್ ಪ್ರಸಿದ್ಧವಾಗಿದೆ

ಬರ್ಧಮಾನ್ ಹವಾಮಾನ

ಉತ್ತಮ ಸಮಯ ಬರ್ಧಮಾನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬರ್ಧಮಾನ್

  • ರಸ್ತೆಯ ಮೂಲಕ
    ಎನ್ ಹೆಚ್ 1 ಕೊಲ್ಕತ್ತಾದ ಮೂಲಕ ಬರ್ಧಮಾನವನ್ನು ಸುಲಭವಾಗಿ ಸಂಪರ್ಕಿಸುತ್ತದೆ ಇಲ್ಲಿಂದ ಸುಮಾರು 102 ಕಿ ಮೀ ಅಂತರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೊಲ್ಕತ್ತಾ ರೈಲ್ವೇ ನಿಲ್ದಾಣ (ಹೌರ) ಬರ್ಧಮಾನದಿಂದ 102 ಕಿ ಮೀ ಅಂತರದಲ್ಲಿದ್ದು ಉಳಿದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿಕೊಡುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಲ್ಕತ್ತದ ನೇತಾಜಿ ಸುಭಾಶ್ ಚಂದ್ರ ವಿಮಾನ ನಿಲ್ದಾಣ ದೇಶದ ಇತರ ರಾಜ್ಯಗಳಿಂದ ಮತ್ತು ಇತರ ದೇಶಗಳಿಂದ ಸಂಪರ್ಕ ಒದಗಿಸಿಕೊಡುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat