ಬಂಡಿಪೋರ್ ನಗರ ಅಥವಾ ವೂಲರ್ ಬಂದರು ವೂಲರ್ ಸರೋವರದ ಪೂರ್ವ ದಂಡೆಯ ಮೇಲಿದೆ. ಜಮ್ಮು ಮತ್ತು ಕಾಶ್ಮೀರದ ಪ್ರಖ್ಯಾತ ಮುಘಲ್ ಉದ್ಯಾನ ನಿಶತ್ ಬಾಗ್ ಅನ್ನು ಪ್ರತಿಬಿಂಬಿಸುವ ಉದ್ಯಾನವನವಿಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಈ ನಗರವು ತನ್ನಲ್ಲಿರುವ ಫಾರೆಸ್ಟ್ ಟ್ರೇನಿಂಗ್ ಮತ್ತು ಸಂಶೋಧನ ಕೇಂದ್ರಕ್ಕೆ ಹೆಸರುವಾಸಿಯಾಗಿದೆ. ಇದಲ್ಲದೆ, ರಾಜ್ಯದ ದೊಡ್ಡ ಮುಸ್ಲಿಂ ಧಾರ್ಮಿಕ ಅಧ್ಯಯನ ಕೇಂದ್ರ ದರೂಲ್-ಉಲ್ಲುಂ-ರೆಹಾಮಿಯಾ ವಿದ್ಯಾಲಯ ಇಲ್ಲಿಯೇ ಇದೆ.
ಚಾರಣ, ಮೀನುಗಾರಿಕೆ ಮತ್ತು ಪರ್ವತಾರೋಹಣದಂತಹ ಸಾಹಸ ಚಟುವಟಿಕೆಗಳಿಗೆ ಬಂಡಿಪೋರ್ ಖ್ಯಾತಿ ಪಡೆದಿದೆ. ಪರ್ವತಾರಹಣದಲ್ಲಿ ಇಷ್ಟವಿದ್ದವರು ನಗರದ ಪೂರ್ವಭಾಗದಲ್ಲಿರುವ ಹರ್ಮುಖ್ ಪರ್ವತವನ್ನು ನೋಡಲೇಬೇಕು. ಹರ್ಮುಖ್ ಪರ್ವತಕ್ಕೆ ಹೊರಡುವಾಗ ಉತ್ಸಾಹದ ಸರೋವರವೆಂದೇ ಪ್ರಸಿದ್ದಿ ಪಡೆದ ಶೀರಾ ಸಿರ್ ದಲ್ಲಿ ಶಿಬಿರಗಳನ್ನು ಹೂಡಬಹದು. ಇಲ್ಲಿರುವ ಅರಿನ್ ನಾಲಾದಲ್ಲಿ ಗ್ರೇ ಟ್ರೌಟ್, ಸಿಲ್ವರ್ ಟ್ರೌಟ್ ಮತ್ತು ರೇನ್ಬೋವ್ ಟ್ರೌಟ್ ಮೀನಿನ ಜಾತಿಗಳನ್ನು ಕಾಣಬಹುದು.