ಶ್ರೀ ರಾಜ್ ಮಂದಿರವು ನಗರ ಅರಮನೆ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಇದು ಸುಮಾರು 16ನೇ ಶತಮಾನದ ಕಲಾಕೃತಿ. ಈ ಅರಮನೆಯು ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇದು ರಜಪೂತ ಶೈಲಿಯ ವಾಸ್ತುಶಿಲ್ಪವಾಗಿದೆ. ಈ ಸ್ಮಾರಕವು ರಾಜಸ್ತಾನದ ರಾಜ ಕುಟುಂಬದ ಸ್ವಂತದ್ದಾಗಿತ್ತು ಮತ್ತು ಸದ್ಯ ಈ ತಾಣವು ಪ್ರವಾಸಿಗರಿಗೆ ಅತ್ಯಂತ ಇಷ್ಟವಾಗುವ ಪ್ರದೇಶ.