ಭೀಮ ಕುಂಡವು ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ ಈ ಪ್ರದೇಶದಲ್ಲಿ ಮಹಾಭಾರತದ ಪಾಂಡವರು ವನವಾಸದ ಸಂದರ್ಭದಲ್ಲಿ ಇಲ್ಲಿ ವಾಸಿಸಿದ್ದರು. ಇಲ್ಲಿಂದ ಆರಂಭವಾದ ಒಂದು ನಾಲೆಯು ಘೋತಿಯಾ ಅಂಬಾ ಎಂಬಲ್ಲಿ ಮುಕ್ತಾಯವಾಗುತ್ತದೆ ಎಂದು ನಂಬಲಾಗಿದೆ. ಮಳೆಗಾಲದಲ್ಲಿ ಈ ನಾಲೆಯನ್ನು ಪಾಂಡವರು ಉಪಯೋಗಿಸುತ್ತಿದ್ದರು ಎಂದು ಹೇಳಲಾಗಿದೆ.