Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಲಾಲ್ ಬಾಗ್

ಲಾಲ್ ಬಾಗ್, ಬೆಂಗಳೂರು

8

ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಲಾಲ್ ಬಾಗ್ ಒಂದು ಜನಪ್ರಿಯ ಸಸ್ಯ ವಿಜ್ನ್ಯಾನದ ಉದ್ಯಾನವನವಾಗಿದೆ. ಲಾಲ್ ಬಾಗ್ ಎಂದರೆ ಆಂಗ್ಲ ಭಾಷೆಯಲ್ಲಿ ರೆಡ್ ಗಾರ್ಡನ್ ಎಂದರ್ಥ. ಹೈದರ ಅಲಿ ರಾಜನು ಇದರ ನಿರ್ಮಾಣವನ್ನು ಪ್ರಾರಂಭಿಸಿ ಅವನ ಮಗನಾದ ಟಿಪು ಸುಲ್ತಾನನು ಪೂರ್ಣಗೊಳಿಸಿದನು. ಲಾಲ್ ಬಾಗ್ ನ 240 ಎಕರೆ ಪ್ರದೇಶದಲ್ಲಿ ಉಷ್ಣವಲಯದ ಸಸ್ಯಗಳ ಬೃಹತ್ ಸಂಗ್ರಹವಿದ್ದು, 1000 ಕ್ಕೂ ಹೆಚ್ಚು ಪ್ರಭೇದದ ವನಸ್ಪತಿಗಳಿವೆ. ಇಲ್ಲಿ ನೀರಾವರಿ ವ್ಯವಸ್ಥೆಯು ಸೊಗಸಾಗಿದ್ದು ಕಮಲಿನ ಕೊಳಗಳು, ಹಚ್ಚ ಹಸಿರಿನ ಹುಲ್ಲಿನ ಹಾಸಿಗೆಗಳು ಮತ್ತು ಹೂವಿನ ದಿಬ್ಬಗಳು ಸುಂದರವಾಗಿ ವಿನ್ಯಾಸಗೊಂಡಿವೆ.

ಸಸ್ಯ ಹಾಗು ವನಸ್ಪತಿಗಳ ಸಂರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸಲು, ಪ್ರತಿವರ್ಷವು ಇಲ್ಲಿ ಹೂವುಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಲಾಲ್ ಬಾಗ್ ಪ್ರತಿದಿನ ಬೆಳಿಗ್ಗೆ 6 ರಿಂದ ಸಾಯಂಕಾಲ 7 ಘಂಟೆಯವರೆಗೆ ತೆರೆದಿರುತ್ತದೆ. ಲಾಲ್ ಬಾಗ್ ವು ರಾಜ್ಯ ಸಾರಿಗೆ ಬಸ್ಸುಗಳು ಹಾಗು ರಾಜ್ಯದ ಇತರ ಪ್ರಮುಖ ನಿಲ್ದಾಣಗಳಿಂದ ಪ್ರವಾಸಿ ಬಸ್ಸುಗಳ ಮೂಲಕವೂ ಒಳ್ಳೆಯ ಸಂಪರ್ಕವನ್ನು ಹೊಂದಿದೆ. ಲಾಲ್ ಬಾಗ್ ವು ತೋಟಗಾರಿಕೆ ನಿರ್ದೇಶನಾಲಯದ ಸಹಕಾರದಲ್ಲಿದ್ದು, 1856 ರಲ್ಲೇ ಸರ್ಕಾರಿ ಸಸ್ಯವಿಜ್ನ್ಯಾನದ ಉದ್ಯಾನವನವೆಂಬ ಮನ್ನಣೆ ಪಡೆದಿದೆ. ವಾರ್ಷಿಕ ಹೂವು ಪ್ರದರ್ಶನ ನಡೆಯುವ ಇಲ್ಲಿನ ಗಾಜಿನ ಮನೆಯು, ಲಂಡನ್ ನ ಕ್ರಿಸ್ಟಲ್ ಅರಮನೆಯಿಂದ ಪ್ರೇರಿತಗೊಂಡು ನಿರ್ಮಾಣವಾಗಿದೆ. ಲಾಲ್ ಬಾಗ್ ನಲ್ಲಿರುವ ಕಲ್ಲು ಅತ್ಯಂತ ಪುರಾತನ ಕಲ್ಲಿನ ರಚನೆಗಳಲ್ಲಿ ಒಂದಾಗಿದ್ದು 3000 ವರ್ಷಗಳಷ್ಟು ಹಳೆಯದಾಗಿದೆ. ಉದ್ಯಾನವನದ ಮಧ್ಯದಲ್ಲಿ ಬೃಹತ್ ಆಕಾರದ ವಿದ್ಯುನ್ಮಾನ ಚಾಲಿತ ಹೂವಿನ ಗಡಿಯಾರವನ್ನು ನಿರ್ಮಿಸಲಾಗಿದ್ದು ಎಚ್.ಎಮ್.ಟಿ ಗೆ ಅರ್ಪಿಸಲಾಗಿದೆ. ಈ ಹಚ್ಚಹಸಿರಿನ ಮಧ್ಯೆ, ಪ್ರಕೃತಿಯ ಮಿಡಿತವನ್ನು ಅನುಭವಿಸುತ್ತ ನಡೆಯುವಾಗ, ಕೆಲವು ಘಳಿಗೆಗಾದರೂ ನಾನು ಮನುಷ್ಯರಿಗಿಂತಲೂ ಪ್ರಕೃತಿಯನ್ನು ತುಂಬ ಪ್ರೀತಿಸುತ್ತೆನೆ ಎಂಬ ಭಾವ ಬರದೇ ಇರದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed