1894 ರಲ್ಲಿ ನಿರ್ಮಾಣ ಹೊಂದಿದ, ಮನುಷ್ಯ ನಿರ್ಮಿತ ಈ ಜಲಾಶಯವು ಬೆಂಗಳೂರಿನ ವಾಯವ್ಯ ಭಾಗಕ್ಕೆ 18 ಕಿ.ಮೀ. ದೂರದಲ್ಲಿದೆ. ನಗರದ ಜನರ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ಇದರ ನಿರ್ಮಾಣವಾಯಿತು. 73.84 ಚ.ಕಿ.ಮೀ. ನ ಒಟ್ಟು ಜಲಾನಯನ ಪ್ರದೇಶವು ಸರೋವರಕ್ಕೆ ಸೇರುತ್ತದೆ. ಇದನ್ನು ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದಕ್ಕೆ 1690 ಮೀ ಉದ್ದದ ಕಟ್ಟೆಯನ್ನೂ ಕಟ್ಟಲಾಗಿದ್ದು ಅದರ ಎತ್ತರವು 40.55 ಮೀ ಆಗಿದೆ.