ವಿಶ್ವದ ಜನಪ್ರಿಯ ತಾಣಗಳಲ್ಲೊಂದಾದ ಇಬಿಜಾನಲ್ಲಿ ಕಂಡು ಬರುವ 'ಬ್ಯಾಂಬು ಸ್ಟೈಲಿಂಗ್' ಮಾದರಿಯ ವಿನ್ಯಾಸವನ್ನು ಇಲ್ಲಿ ಕಾಣಬಹುದಾಗಿದ್ದು, ವಿಶೀಷ್ಟ ಬಗೆಯ ಅನುಭವವನ್ನು ಒದಗಿಸುತ್ತದೆ. ಪಾವೊಲಿಮ್ ಕಡಲ ತೀರದಲ್ಲಿರುವ ಈ ಕ್ಲಬ ಸಿಸ್ಸಂಶಯವಾಗಿ ರಂಗೇರಿದ ಔತಣಕೂಟಗಳಿಗೆ ಜನಪ್ರೀಯವಾಗಿದ್ದು ದಕ್ಷಿಣ ಗೋವಾದಲ್ಲೆ ಹೆಸರುವಾಸಿಯಾಗಿದೆ.
ಸುಮಾರು ದೊಡ್ಡದಾದ ಈ ಕ್ಲಬನಲ್ಲಿ ಕಳೆಯುವ ಒಂದೊಂದು ಕ್ಷಣವು ರೋಮಾಂಚನಕಾರಿಯಾದ ಅನುಭವವನ್ನು ಕೊಡುವುದಲ್ಲದೆ ಮರೆಯಲಾದಂತಹ ಚಿತ್ರಣವನ್ನು ಮನಸ್ಸಿನಲ್ಲಿ ಬಿತ್ತುವುದೂ ಅಷ್ಟೇ ಸತ್ಯ.
ಇಡಿ ದಕ್ಷಿಣ ಗೋವಾದಲ್ಲಿ ಕೆಲವೆ ಕೆಲವು ಸ್ಥಳಗಳಲ್ಲಿ ಇದು ಕೂಡ ರಾತ್ರಿಯೆಲ್ಲ ಕಾರ್ಯ ನಿರ್ವಹಿಸುವ ಪರವಾನಿಗೆಯನ್ನು ಪಡೆದಿರುವುದರಿಂದ ಅತ್ಯಾನಂದದ ಅನುಭವಗಳು ಆಗುವುದರಲ್ಲಿ ಎರಡು ಮಾತಿಲ್ಲ.ಇನ್ನು ನೃತ್ಯಕ್ಕಾಗಿಯೆ ವಿನ್ಯಾಸಿಸಲಾದ ನೆಲವೊಂದಿದ್ದು, ನೃತ್ಯ ಇಷ್ಟಪಡುವವರು ಇದರ ಉಪಯೋಗವನ್ನು ಪಡೆಯಬಹುದು. ಈ ರೀತಿಯಾಗಿ ಕ್ಯಾಫೆ ಡೆಲ್ ಮಾರ್ ಬೀಚ್ ಬಾರ್ ಆಂಡ ಕ್ಲಬವು ಎಲ್ಲಾ ರೀತಿಯ ಮನೋರಂಜನೆಯನ್ನು ಹೊಂದಿದ್ದು ಯಾವುದೆ ವಯೋಮಾನದ ಪ್ರವಾಸಿಗರು ಆನಂದಿಸಬಹುದು. ಇಲ್ಲಿಗೆ ತಲುಪಲು ವಾಸ್ಕೊ, ಮಾರ್ಗೊ ಇಲ್ಲವೆ ವಿಮಾನ ನಿಲ್ದಾಣದಿಂದ ಸುಲಭವಾಗಿ ಕ್ಯಾಬ್ ಪಡೆಯಬಹುದು. ಕೋಲ್ವಾ ಬೀಚಿನ ದಕ್ಷಿಣಕ್ಕೆ ಸ್ವಲ್ಪ ಮುಂದೆ ಸಾಗಿ ಯಾರಿಗಾದರು ಪಾವೋಲಿಮ್ ಬೀಚ್ ಬಗ್ಗೆ ವಿಚಾರಿಸಬಹುದು.