Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾದಾಮಿ » ಆಕರ್ಷಣೆಗಳು » ಗುಹಾ ದೇವಾಲಯಗಳು

ಗುಹಾ ದೇವಾಲಯಗಳು, ಬಾದಾಮಿ

4

ಬಾದಾಮಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಮರಳುಗಲ್ಲಿನಿಂದ ನಿರ್ಮಿತ ಗುಹೆ ದೇವಾಲಯಗಳನ್ನು ನೋಡಬಹುದು. ಇವು ತಮ್ಮ ಪುರಾತನ ಮತ್ತು ಧಾರ್ಮಿಕ ಆಚರಣೆಗಳು ಹಾಗು ವಿಷಯಗಳನ್ನು ಕ್ರಿಯಾಶೀಲ ಕೆತ್ತನೆಗಳ ಮೂಲಕ ವಿವರಿಸುತ್ತವೆ.  ನಾಲ್ಕು ಗುಹೆಗಳುಳ್ಳ ದೇವಾಲಯದಲ್ಲಿ ಅತ್ಯಂತ ಹಳೆಯದು 5ನೇ ಶತಮಾನದ ಗುಹೆ ದೇವಾಲಯ.  ಈ ದೇವಾಲಯದಲ್ಲಿ ಶಿವನ ಅರ್ಧನಾರೀಶ್ವರ ಮತ್ತು ಹರಿಹರ ಅವತಾರಗಳ  ಕೆತ್ತನೆಗಳಿದ್ದು ನಟರಾಜನ ಅವತಾರದಲ್ಲಿ ತಾಂಡವ ನೃತ್ಯದಲ್ಲಿ ತೊಡಗಿರುವ ಕೆತ್ತನೆಯನ್ನು ಕಾಣಬಹುದಾಗಿದೆ. ಪರಮ ಶಿವನನ್ನು ಹರಿಹರನ ಬಲಕ್ಕೆ ಮತ್ತು ವಿಷ್ಣುವಿನ ಎಡಭಾಗದಲ್ಲಿ ಇರಿಸಲಾಗಿದೆ. ಈ ಗುಹೆಗೆ ಭೇಟಿ ಕೊಟ್ಟಾಗ ಮಹಿಷಾಸುರಮರ್ಧಿನಿ ಮತ್ತು ಗಣಪತಿ ,ಶಿವಲಿಂಗ ಹಾಗೂ ಷಣ್ಮುಖರನ್ನೂ ಕಾಣಬಹುದು.

 

ಎರಡನೇ ಗುಹೆ ಸ್ವಾಮಿ ವಿಷ್ಣುವಿಗೆ ಸಮರ್ಪಿಸಲಾಗಿದ್ದು ಇಲ್ಲಿನ ವರಾಹ ಮತ್ತು ತ್ರಿವಿಕ್ರಮರ ಅವತಾರಗಳಲ್ಲಿ ಬಿಂಬಿಸಲಾಗಿದೆ.  ಪುರಾಣದಲ್ಲಿ ಹೇಳಿರುವ ವಿಷ್ಣು ಮತ್ತು ಆತನ ಗರುಡ ಅವತಾರವನ್ನು ಈ ದೇವಾಲಯದ ಛಾವಣಿಯಲ್ಲಿ ಕಾಣಬಹುದು.  100 ಅಡಿ ಆಳವಿರುವ ಈ ಮೂರನೇ ಗುಹೆಯಲ್ಲಿ ತ್ರಿವಿಕ್ರಮ ಹಾಗೂ ನರಸಿಂಹರ ಅವತಾರದಲ್ಲಿ ವಿಷ್ಣುವಿನ 3 ಕಲಾಕೃತಿಗಳಿವೆ.  ಇದರ ಜೊತೆಗೆ ಪ್ರವಾಸಿಗರು ಶಿವ ಮತ್ತು ಪಾರ್ವತಿಯರ ಕಲ್ಯಾಣ ಮಹೋತ್ಸವದ ದೃಶ್ಯಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕಲಾಕೃತಿಗಳ ರೂಪದಲ್ಲಿ ಕಾಣಬಹುದು. ನಾಲ್ಕನೇ ಗುಹೆ ದೇವಾಲಯ ಜೈನ ಧರ್ಮಕ್ಕೆ ಸಮರ್ಪಿತವಾಗಿದ್ದು ಮಹಾವೀರನು ಕುಳಿತುರುವ ಭಂಗಿಯ ಕಲಾಕೃತಿ ಮತ್ತು ತೀರ್ಥಂಕರ ಪಾರ್ಶ್ವನಾಥರ ಪ್ರತಿಮೆಯನ್ನು ಗುಹೆಯ ಜೊತೆಯಲ್ಲೇ ನಿರ್ಮಿಸಿರುವುದನ್ನು ಕಾಣಬಹುದು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri