Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾದಾಮಿ » ಆಕರ್ಷಣೆಗಳು » ಪುರಾತನ ವಸ್ತುಸಂಗ್ರಹಾಲಯ

ಪುರಾತನ ವಸ್ತುಸಂಗ್ರಹಾಲಯ, ಬಾದಾಮಿ

1

ಬಾದಾಮಿಯನ್ನು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪುರಾತನ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಈ ವಸ್ತು ಸಂಗ್ರಹಾಲಯವನ್ನು 1979ರಲ್ಲಿ ಭಾರತದ ಪುರಾತತ್ವ ಇಲಾಖೆ ನಿರ್ಮಿಸಿದ್ದು ಆ ಸಮಯದಲ್ಲಿನ ಶಾಸನಗಳನ್ನು, ಕೆತ್ತನೆಗಳನ್ನು ಹಾಗೂ ಸಂಶೋಧಿತ ವಸ್ತುಗಳನ್ನು ಸಂರಕ್ಷಿಸಲು ಬಳಸಲಾಗುತಿತ್ತು.  ಆದರೆ 1982 ರಷ್ಟರಲ್ಲಿ ಇದನ್ನು ವಿಶಿಷ್ಟವಾದ ಸ್ಥಳೀಯ ಕೆತ್ತನೆಗಳನ್ನು ಪ್ರದರ್ಶಿಸುವಂತಹ ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲಾಯಿತು.

 

ಈ ಸಂಗ್ರಹಾಲಯವನ್ನು ಸಂದರ್ಶಿಸುವ ಸಮಯದಲ್ಲಿ ಪ್ರವಾಸಿಗರು ಸಮೃದ್ಧಿ ಗೆ ಹೆಸರಾದ ಲಜ್ಜಾ ಗೌರಿ ಆಕೃತಿಗಳು ಮತ್ತು 6ನೇ ಶತಮಾನದಿಂದ 16ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಿದ ಪ್ರಾಚೀನ ಶಾಸನಗಳನ್ನು ಕಾಣಬಹುದು. ಈ ಸಂಗ್ರಹಾಲಯದಲ್ಲಿ 4 ಪ್ರದರ್ಶನಾ ಘಟಕಗಳಿದ್ದು ಅವುಗಳಲ್ಲಿ ಶಿವ, ವಿಷ್ಣುವಿನ ವಿವಿಧ ಅವತಾರಗಳು, ಗಣಪತಿ ಹಾಗೂ ಭಗವದ್ಗೀತೆಯನ್ನು ಬಿಂಭಿಸುವ ಹಲವು ದೃಶ್ಯಾವಳಿಗಳನ್ನು ಪ್ರದರ್ಶಿಸುತ್ತವೆ. ಶಿವನ ವಾಹನವಾದ ಸುಂದರವಾದ ನಂದಿಯ ವಿಗ್ರಹವನ್ನು ಸಂಗ್ರಹಾಲಯದ ಪ್ರವೇಶದಲ್ಲಿ ಇರಿಸಲಾಗಿದೆ.

 

ಈ ಸಂಗ್ರಹಾಲಯದಲ್ಲಿ ನಾಲ್ಕು ಪ್ರದರ್ಶನಾಗೂಡುಗಳಿದ್ದು ಮುಂಭಾಗದಲ್ಲಿ ಮತ್ತು ವರಾಂಡದಲ್ಲಿಯೂ ಸಹ ತೆರೆದ ಪ್ರದರ್ಶನಾ ಗೂಡುಗಳಿವೆ. ಇಲ್ಲಿನ ಪ್ರದರ್ಶನಗೂಡುಗಳಲ್ಲಿ ಒಂದರಲ್ಲಿರುವ ಶಿಡ್ಲಫಡಿ ಗುಹೆಯೂ ಪ್ರಾಚೀನ ಕಾಲದ ಕಲ್ಲಿನ ನೆಲೆಗೆ ಸಾಕ್ಷಿಯಾಗಿದೆ. ಕಲ್ಲಿನ ಕಲಾಕೃತಿಗಳೊಂದಿಗೆ ಈ ಪ್ರದರ್ಶನಾಗೂಡು ಪ್ರಾಚೀನ ಕಲೆ ಹಾಗೂ ಹಲವು ಶಾಸನಗಳನ್ನು ಪ್ರದರ್ಶಿಸುತ್ತದೆ. ಅಲ್ಲಿರುವ ತೆರೆದ ವರಾಂಡ ಪ್ರದರ್ಶನಾಗೂಡಿನಲ್ಲಿ ಪ್ರವಾಸಿಗರು ವೀರ್ಗಲ್ಲುಗಳನ್ನು, ದ್ವಾರಪಾಲಕ ಜೋಡಿಯ ಆಕರ್ಷಕ ಚಿತ್ರಕಲೆ ಮತ್ತು ಶಾಸನಗಳನ್ನು ನೋಡಬಹುದು. ಸಂಗ್ರಹಾಲಯದ ಹೊಸಾ ಪ್ರದರ್ಶನಾಗೂಡಿನಲ್ಲಿ ಹಲವು ಶಿಲಾಶಾಸನ ವಿವರಗಳು ಮತ್ತು ವಾಸ್ತುಶಿಲ್ಪಗಳನ್ನು ಪ್ರದರ್ಶಿಸಲಾಗಿದೆ

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat