ಅಮಜರ್ ಶರೀಫ್ ಗೆ ಧಾರ್ಮಿಕ ಇತಿಹಾಸ ಹೊಂದಿದ್ದು ಮುಸ್ಲಿಮ್ ಸಮುದಾಯದವರಿಗೆ ಪ್ರಮುಖ ಯಾತ್ರಾ ಸ್ಥಳವಾಗಿದೆ. ಅಮಜರ್ ಶರೀಫ್ ಭಕ್ತರು ಮುಸ್ಲಿಮ್ ಸಂತ ಹಜರತ್ ಸಯ್ಯಾದುನ್ನಾ ಮೊಹಮ್ಮದ್ ಜಿಲಾನಿ ಅಮಜಾರಿ ಕ್ವಾದ್ರಿಯ ಅನುಯಾಯಿಗಳು. ಸಾವಿರಾರು ಮುಸ್ಲಿಮರು ಈ ಸಂತರ ವಾರ್ಷಿಕ ದಿನದಂದು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ವಾರ್ಷಿಕ ದಿನ ಜೂನ್ ಮೊದಲ ವಾರದಲ್ಲಿ ನಡೆಯುತ್ತದೆ. ಬಾಬಾ ಹಜರತ್ ಅವರ ಪವಿತ್ರ ಕೂದಲನ್ನು ಈ ಸಮಯದಲ್ಲಿ ಭಕ್ತರಿಗೆ ನೋಡಲು ಅವಕಾಶ ನೀಡಲಾಗುತ್ತದೆ.