Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ಆಕರ್ಷಣೆಗಳು » ಸಂಗ್ಡ ಜಲಪಾತ

ಸಂಗ್ಡ ಜಲಪಾತ, ಅರಕು ಕಣಿವೆ

1

ಸಂಗ್ಡ ಜಲಪಾತವು ಅರಕು ಕಣಿವೆಯ ಒಂದು ಭಾಗವಾಗಿದ್ದು, ಪೂರ್ವ ಘಟ್ಟಗಳ ಸುಂದರ ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ಜಲಪಾತವು ಸಂಗ್ಡ ಎಂಬ ಹಳ್ಳಿಗೆ ಅತ್ಯಂತ ಸಮೀಪದಲ್ಲಿದೆ. ಹಾಗಾಗಿ ಈ ಹೆಸರು ಈ ಜಲಪಾತಕ್ಕೆ ಬಂದಿದೆ. ತನ್ನ ಸುತ್ತಮುತ್ತಲ ಪ್ರದೇಶ ಮತ್ತು ಅದ್ಭುತವಾದ ಸ್ಥಳೀಯ ಜನರಿಂದಾಗಿ ಈ ಜಲಪಾತವು ಅತ್ಯಂತ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದಾಗಿದೆ.

ಈ ಜಲಪಾತವು ದಟ್ಟಡವಿಯ ನಡುವೆ ನೆಲೆಗೊಂಡಿದೆ. ಈ ಅಡವಿಯ ಶಾಂತಿಯನ್ನು ಕದಡುವ ಒಂದೇ ಒಂದು ಅಂಶವೆಂದರೆ ಅದು ಈ ಜಲಪಾತ ಭೋರ್ಗರೆಯುವ ಸದ್ದು. ಹಲವು ಪ್ರವಾಸಿಗರು ಮತ್ತು ಸ್ಥಳೀಯರು ಈ ಜಲಪಾತವನ್ನು ನೋಡಲು ಆಗಮಿಸುತ್ತಿರುತ್ತಾರೆ. ಈ ಜಲಪಾತವು ಎಲ್ಲರ ನೆಚ್ಚಿನ ವಿಹಾರ ತಾಣವಾಗಿದೆ. ಈ ಜಲಪಾತದಲ್ಲಿ ಆಟವಾಡುತ್ತ ಪರಿಸರದೊಂದಿಗೆ ಕಾಲ ಕಳೆಯುವ ಸಲುವಾಗಿ ಹಲವರು ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಈ ಜಲಪಾತಕ್ಕೆ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಹಳ್ಳಿಯ ಮೂಲಕ ಸಾಗುವ ಹಳ್ಳ ದಿಣ್ಣೆಗಳ ರಸ್ತೆಯು ನಿಮ್ಮನ್ನು ಜಲಪಾತದ ಬಳಿಗೆ ಕರೆದೊಯ್ಯುತ್ತದೆ. ಬಹುದೂರದಿಂದಲೆ ನೀವು ಜಲಪಾತ ಭೋರ್ಗರೆಯುವ ಸದ್ದನ್ನು ಕೇಳಬಹುದು. ಆ ಸದ್ದು ಕೇಳಿದ ಕೆಲ ಕ್ಷಣಗಳ ನಂತರ ನಿಮಗೆ ಜಲಪಾತವು ಕಾಣಸಿಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City