ಸೈಯದ್ ಶಾಬ್ ಮಸೀದಿಯು ಈ ಸ್ಥಳದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಮಾರ್ತಂಡ ಭೂಭಾಗದಲ್ಲಿ ಅನಿಚ್ಟೀಪ್ ಬೆಟ್ಟದ ಬುಡದಲ್ಲಿ ನೆಲೆಗೊಂಡಿದೆ. ಈ ಮಸೀದಿಯನ್ನು ಹಝರತ್ ಸೈಯದ್ ಮೊಹಮ್ಮದ್ - ಉಲ್ಲಾ ಖಾದ್ರಿ ಸಮ್ನಾನಿಯವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ಈ ಸ್ಥಳವು ಮುಸಲ್ಮಾನರಿಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ 8ನೇ ಶಬನ್ ಎಂದರೆ ಸಂತರ ಪುಣ್ಯ ತಿಥಿಯಂದು ಇಲ್ಲಿಗೆ ಭೇಟಿ ಕೊಡುವುದು ಅತ್ಯಂತ ಶ್ರೇಷ್ಠವೆಂದು ಭಾವಿಸಲಾಗಿದೆ.