Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ಆಕರ್ಷಣೆಗಳು » ಮುಂದಂತುರೈ-ಕಾಲಕಾಡ್ ಹುಲಿ ಧಾಮ

ಮುಂದಂತುರೈ-ಕಾಲಕಾಡ್ ಹುಲಿ ಧಾಮ, ಅಂಬಸಮುದ್ರಂ

2

ಪಶ್ಚಿಮ ಘಟ್ಟಗಳ ಅತ್ಯಂತ ದಕ್ಷಿಣ ಭಾಗದಲ್ಲಿ ಸುಮಾರು ಎಂಟುನೂರು ಚದರ ಕಿ.ಮೀ ವಿಸ್ತಾರದಲ್ಲಿ ಹರಡಿಹೊಂಡಿರುವ ಈ ಅಭಯಾರಣ್ಯದಲ್ಲಿ ಹುಲಿ ಮಾತ್ರವಲ್ಲದೇ ಚಿರತೆ, ನರಿ, ಕತ್ತೆಕಿರುಬ, ಕಾಡುಬೆಕ್ಕು, ವಿವಿಧ ಪ್ರಜಾತಿಯ ಮಂಗಗಳು, ಕಾಡುಹಂದಿಗಳು ಹಾಗೂ ಕೆಲವು ವಿಧಧ ಜಿಂಕೆಗಳೂ ಆಶ್ರಯ ಪಡೆದಿವೆ. 81 ವಿಧದ ಸರೀಸೃಪಗಳು, 37 ವಿಧದ ಉಭಯಜೀವಿಗಳು ಹಾಗೂ 273 ಪ್ರಜಾತಿಯ ಹಕ್ಕಿಗಳು, 77 ವಿಧದ ಸಸ್ತನಿಗಳು ಈ ಅಭಯಾರಣ್ಯದಲ್ಲಿ ವಾಸಿಸುತ್ತಿವೆ. ಈ ಅಭಯಾರಣ್ಯದಲ್ಲಿ ಹರಿಯುವ ಸುಮಾರು ಹದಿನಾಲ್ಕು ನದಿಗಳು ಮತ್ತು ಉಪನದಿಗಳಲ್ಲಿ 33 ವಿಧದ ಮೀನುಗಳಿವೆ. ನೂರೈವತ್ತಕ್ಕೂ ಹೆಚ್ಚಿನ ವಿಧದ ಸಸ್ಯಗಳನ್ನು ಗುರುತಿಸಲಾಗಿದೆ.  

1962ರಲ್ಲಿ ಕಾಲಕಾಡ್ ಅಭಯಾರಣ್ಯ (251 ಚ.ಕಿ.ಮೀ) ಹಾಗೂ ಮುಂದಂತುರೈ ಅಭಯಾರಣ್ಯ (567 ಚ.ಕಿ.ಮೀ) ಸ್ಥಾಪನೆಯಾಗಿದ್ದವು. ಎರಡೂ ಅಭಯಾರಣ್ಯಗಳನ್ನು 1988ರಲ್ಲಿ ಒಂದಾಗಿಸಿ ಈ ಅಭಯಾರಣ್ಯಕ್ಕೆ 1988ರಲ್ಲಿ ರಾಷ್ಟ್ರೀಯ ಹುಲಿ ಧಾಮದ ಮಾನ್ಯತೆ ದೊರಕಿದೆ.  2010ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಹತ್ವದ  'ಪ್ರಾಜೆಕ್ಟ್ ಟೈಗರ್' ಯೋಜನೆಗೂ ಇಲ್ಲಿ ಅನುಮೋದನೆ ದೊರಕಿದೆ.

ಈ ಅಭಯಾರಣ್ಯದಲ್ಲಿ 24ಕ್ಕೂ ಹೆಚ್ಚು ಟ್ರೆಕ್ಕಿಂಗ್ ದಾರಿಗಳಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಈ ದಾರಿಗಳಲ್ಲಿ  ಪ್ರವಾಸಿಗರನ್ನು ಕರೆದೊಯ್ಯುತ್ತಾರೆ. ಅರಣ್ಯ ಇಲಾಖೆಯ ಕಾಟೇಜ್ ಸಹಾ ಲಭ್ಯವಿದ್ದು ವಸತಿಯ ಅನುಕೂಲವೂ ಇದೆ. ವಾರದ ಏಳೂ ದಿನ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಈ ಅಭಯಾರಣ್ಯವನ್ನು ಸಂದರ್ಶಿಸಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri