ಕಲಾಕಂದ್ ಮಾರುಕಟ್ಟೆಯು ಖರೀದಿದಾರರ ಸ್ವರ್ಗ. ವಿಶೇಷವಾಗಿ ಈ ಮಾರುಕಟ್ಟೆಯು ಬಾಯಲ್ಲಿ ನೀರೂರಿಸುವ ಸಿಹಿ ತಿನಿಸುಗಳಿಗೆ ಹೆಸರಾದದ್ದು. ಈ ಮಾರುಕಟ್ಟೆಯಲ್ಲಿ ಹಲವು ಬೀದಿಗಳಿವೆ. ಜನಪ್ರಿಯ ಸಿಹಿ ತಿಂಡಿಗಳ ಹೆಸರನ್ನೇ ಈ ಬೀದಿಗಳಿಗೆ ಇಡಲಾಗಿದೆ. ಗ್ರಾಹಕರು ಇಲ್ಲಿ ಕಡಿಮೆ ಬೆಲೆಯಲ್ಲಿ ಕರಕುಶಲ ಸಾಮಗ್ರಿಗಳು ಮತ್ತು ಆಭರಣಗಳನ್ನೂ ಕೂಡಾ ಸಮೀಪದ ಮಾರುಕಟ್ಟೆಗಳಲ್ಲಿ ಖರೀದಿಸಬಹುದು. ಮಾರುಕಟ್ಟೆಯಲ್ಲಿ ಹೆಚ್ಚು ವಿನಿಮಯ ನಡೆಯುವುದು ಸರಾಫಾ ಬಜಾರ್ಪ, ಬಝಾಝಾ ಬಜಾರ್, ಹೋಪ್ ಸರ್ಕಸ್, ಕೆದಾಲ್ಗುಂಜಿ ಬಜಾರ್ ಮತ್ತು ಮಲಖೇರಾ ಬಜಾರ್. ಮಂಗಳವಾರದ ಹೊರತಾಗಿ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.