Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಮೋರಾ » ಆಕರ್ಷಣೆಗಳು » ಕತರ್ಮಲ ಸೂರ್ಯ ದೇವಾಲಯ

ಕತರ್ಮಲ ಸೂರ್ಯ ದೇವಾಲಯ, ಅಲ್ಮೋರಾ

1

ಕತರ್ಮಲ ಸೂರ್ಯ ದೇವಾಲಯ ಅಲ್ಮೋರಾ ಪಟ್ಟಣದಿಂದ 16 ಕಿ. ಮೀ ದೂರದಲ್ಲಿದ್ದು, ಜನಪ್ರಿಯ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ಒರಿಸ್ಸಾದಲ್ಲಿನ ಕೊನಾರ್ಕ್ ಸೂರ್ಯ ದೇವಸ್ಥಾನದ ನಂತರ ದೇಶದಲ್ಲಿ ಸೂರ್ಯ ದೇವರ ಎರಡನೇ ಪ್ರಮುಖ ದೇವಾಲಯವಾಗಿದೆ. ದೇವಾಲಯದ ಸಂಕೀರ್ಣ 800 ವರ್ಷ ಹಳೆಯದು ಮತ್ತು ಮುಖ್ಯ ದೇವಾಲಯದ 45 ಸಣ್ಣ ದೇವಾಲಯಗಳಿಂದ ಸುತ್ತುವರೆದಿದೆ.

ಈ ಪ್ರಾಚೀನ ಮಂದಿರ ಅವಶೇಷಗಳು ಇಂದಿಗೂ ಸಹ ಅಲ್ಮೋರಾ ಪಟ್ಟಣದ ಒಂದು ಮುಖ್ಯ ಪ್ರವಾಸಿಗರ ಆಕರ್ಷಣೆ ಎಂದೇ ಪರಿಗಣಿಸಲಾಗಿದೆ. ಪವಿತ್ರ ಹಿಂದೂ ದೇವರು ಬೃಹಾದಿತಾ ಅಥವಾ ವೃದ್ಧಾದಿತ್ಯ ಎಂದು ಕರೆಯಲ್ಪಡುವ  ಸೂರ್ಯ ದೇವನನ್ನು ಇಲ್ಲಿ ಪೂಜಿಸಲಾಗುತ್ತದೆ. ಭಕ್ತರು ದೇವಸ್ಥಾನದ ಆವರಣದಲ್ಲಿ ಶಿವ-ಪಾರ್ವತಿ ಮತ್ತು ಲಕ್ಷ್ಮಿ-ನಾರಾಯಣರ ವಿಗ್ರಹಗಳನ್ನು ಸಹ ನೋಡಬಹುದು. ದೇವಸ್ಥಾನದ ವಾಸ್ತುಶಿಲ್ಪ ಶೈಲಿಯ ಅನನ್ಯವಾಗಿದೆ ಮತ್ತು ಅದರ ಗೋಡೆಗಳ ಮೇಲೆ ಕೆತ್ತಿದ ಚಿತ್ರಗಳು ಹೊಳೆಯುತ್ತಿರುತ್ತವೆ.

ದಾಖಲೆಗಳ ಪ್ರಕಾರ, ಈ ದೇವಾಲಯವು ಕತ್ಯೂರಿಯ ರಾಜ ಕತರ್ಮಲಾ ರಾಜ ನಿಂದ 9ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಸಮುದ್ರ ಮಟ್ಟದಿಂದ 2116 ಮೀಟರ್ ಎತ್ತರದಲ್ಲಿರುವ ಈ ದೇವಾಲಯ, ಪೂರ್ವಕ್ಕೆ ಮುಖ ಹೊಂದಿದೆ. ಇಲ್ಲಿ ಸೂರ್ಯನ ಮೊದಲ ಕಿರಣ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಶಿವ ಲಿಂಗದ ಮೇಲೆ ಬೀಳುವ ರೀತಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯಗಳ ಗೋಡೆಗಳು ಕಲ್ಲುಗಳಿಂದ ತಯಾರಿಸಲ್ಪಟ್ಟಿವೆ ಮತ್ತು ಖಂಬಗಳು ಸುಂದರ ಕೆತ್ತನೆಗಳಿಂದ ಅಲಂಕೃತಗೊಂಡಿವೆ. ಮರದ ಬಾಗಿಲುಗಳು ದೇವಾಲಯದ ಸುಂದರ ವಾಸ್ತುಶಿಲ್ಪದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ. ಆದರೆ ಇಲ್ಲಿನ ದೇವರ ವಿಗ್ರಹವವು 10 ನೇ ಶತಮಾನದಲ್ಲಿ ಕಳ್ಳತನವಾಗಿದ್ದು, ಮುನ್ನೆಚ್ಚರಿಕೆಯ ಕರ್ಮವಾಗಿ ಕೆತ್ತಿದ ಬಾಗಿಲು ಮತ್ತು ಫಲಕಗಳನ್ನು ದೆಹಲಿಯಲ್ಲಿರುವ  ನ್ಯಾಷನಲ್ ಮ್ಯೂಸಿಯಂ (ರಾಷ್ಟ್ರೀಯ ವಸ್ತು ಸಂಗ್ರಹಾಲಯ) ಗೆ ಸ್ಥಳಾಂತರಿಸಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun