Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಕೃಷ್ಣಾಪುರಂ ಅರಮನೆ

ಕೃಷ್ಣಾಪುರಂ ಅರಮನೆ, ಅಲೆಪ್ಪಿ

8

ಕೃಷ್ಣಾಪುರ ಅರಮನೆಗೆ ಈ ಹೆಸರು ಬಂದಿರಲು ಕಾರಣ ಅರಮನೆಯ ಪಕ್ಕದಲ್ಲಿರುವ ಕೃಷ್ಣಾಪುರ ದೇವಸ್ಥಾನ. ಕೃಷ್ಣಾಪುರ ಅರಮನೆಯ ಜಗತ್ತು ನೂರಾರು ಬದಲಾವಣೆಗಳನ್ನು ಕಂಡಿದೆ. ಕೃಷ್ಣಾಪುರಂನ ಮೂಲ ಅರಮನೆ 18 ನೇ ಶತಮಾನದಲ್ಲಿ ನೆಲಸಮವಾದಾಗ ತಿರುವಾಂಕೂರಿನ ರಾಜಾ ಅನಿಜಮ್ ತಿರುನಲ್ ಮಾರ್ತಾಂಡ ವರ್ಮ ನೂತನ ಅರಮನೆಯನ್ನು ನಿರ್ಮಿಸಿದ. ಈ ಅರಮನೆ ಸಾಂಪ್ರದಾಯಿಕ ಶೈಲಿಯ ವಾಸ್ತು ರಚನೆಯನ್ನು ಹೊಂದಿದ್ದು, ಈ ನೆಲದ ವಿಶೇಷ ಆಕರ್ಷಣೆಯಾಗಿ ಉಳಿದುಕೊಂಡಿದೆ.

1950 ರಲ್ಲಿ ಕೇರಳದ ಪುರಾತತ್ವ ಇಲಾಖೆ ಹಳೆಯ ಅರಮನೆ ಸಂಪೂರ್ಣ ನೆಲಕಚ್ಚುವ ಮುನ್ನ ಅದರ ರಕ್ಷಣೆಗೆ ಮುಂದಾಗಿದ್ದರ ಪರಿಣಾಮ ಈಗಿನ ಸ್ವರೂಪದಲ್ಲಿ ಉಳಿದುಕೊಂಡಿದೆ. ಮೂರು ಹಂತದಲ್ಲಿ ತಲೆ ಎತ್ತಿ ನಿಂತಿರುವ ಈ ಭವ್ಯ ಅರಮನೆ ಪೂರ್ವ ಮತ್ತು ಪಶ್ಚಿಮದ ವಾಸ್ತು ಶೈಲಿಗಳನ್ನು ಒಳಗೊಂಡಿದೆ. ಅರಮನೆಯ ಆವರಣ ಸುಂದರವಾದ ಹುಲ್ಲುಹಾಸು, ಮನಸೆಳೆಯುವ ಕಾರಂಜಿ ಹಾಗೂ ನೀರಿನ ಕೊಳವನ್ನು ಒಳಗೊಂಡಿದೆ. ಐತಿಹಾಸಿಕ ಅವಶೇಷಗಳಾದ ಕಲಾಕೃತಿಗಳು, ನಾಣ್ಯಗಳು ಮುಂತಾದವುಗಳ ಹೊರತಗಿಯೂ ಕೇರಳದ ಭವ್ಯತೆಯನ್ನು ಕಣ್ತುಂಬಿಕೊಳ್ಳಲು ಒಮ್ಮೆ ಕೃಷ್ಣಾಪುರಂಗೆ ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed