ಭಾರತದಲ್ಲಿ ಸ್ಥಾಪಿತವಾದ ಪ್ರಪ್ರಥಮ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಅಲಹಾಬಾದ್ ಹೈಕೋರ್ಟ್ ಪಾತ್ರವಾಗಿದೆ. ಪೂರ್ಣ ಪ್ರಮಾಣದಲ್ಲಿ ಇಡೀ ಉತ್ತರ ಪ್ರದೇಶ ರಾಜ್ಯದ ನ್ಯಾಯ ನಿರ್ವಹಣೆ ಕೆಲಸವನ್ನು ಹೈಕೋರ್ಟ್ ಹೊತ್ತುಕೊಂಡಿದೆ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಇದನ್ನು ಮೊದಲು ಆಗ್ರಾದಲ್ಲಿ ಸ್ಥಾಪಿಸಲಾಗಿತ್ತು. ನಂತರ ನಿರ್ವಹಣೆಗೆ ಸಂಬಂಧಪಟ್ಟ ವಿಷಯದಿಂದ ಅಲಾಹಾಬಾದ್ ಗೆ ಸ್ಥಳಾಂತರಿಸಲಾಯಿತು.
ಈಗ ಇರುವ ಕಟ್ಟಡವನ್ನು 1950ರ ಕಾಲದಲ್ಲಿ ಕಟ್ಟಿಸಲಾಯಿತು. ಈ ಕಟ್ಟಡ ಬೃಹತ್ತಾದ ಸಂಕೀರ್ಣವಾಗಿದ್ದು, ಇಲ್ಲಿ ಭಾರತದ ಹಾಗು ಬ್ರಿಟಿಷರ ಕಲಾಕೌಶಲ್ಯದ ಸಮ್ಮಿಲನವನ್ನು ಕಾಣಬಹುದಾಗಿದೆ. ಹೈಕೋರ್ಟ್ ಮುಂಭಾಗದಲ್ಲಿ ಸುಂದರವಾದ ಹುಲ್ಲುಹಾಸು, ಮೈದಾನಗಳ ಇಡೀ ಸಂಕಿರ್ಣ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ.