ಇದು ಜೈನ ಸಂಸ್ಕೃತಿಗೆ ಸೇರಿದ ಸ್ಥಳ. ಭಾರತದಲ್ಲಿ ಜೈನ ಸಮುದಾಯಕ್ಕೆ ಸೇರಿದ ಅತಿ ದೊಡ್ಡ ಸ್ಥಳವಿದು. ಇದು ಸುಮಾರು 16 ಎಕರೆ ಪ್ರದೇಶದಲ್ಲಿದೆ. ಇದು ಸಾಮಾಜಿಕ-ಧಾರ್ಮಿಕ, ಸಮಾಜಸೇವೆ, ಶಿಕ್ಷಣ, ಮತ್ತು ಸಂಶೋಧನೆಗೆ ಮೀಸಲಾಗಿದೆ. ಆದ್ದರಿಂದ ಉಳಿದ ಧಾರ್ಮಿಕ ಸ್ಥಳಗಳಂತೆ ಇಲ್ಲ. ಇಲ್ಲಿ ನಾಲ್ಕು ದೇವಸ್ಥಾನಗಳಿವೆ. ಉಳಿದ ಸ್ಥಳವನ್ನು ಸಂಶೋಧನೆ ಮೊದಲಾದ ಕಾರಣಗಳಿಗೆ ಬಿಟ್ಟುಕೊಡಲಾಗಿದೆ. ಇದು ಅಲೀಗಢದ ಹೆದ್ದಾರಿಯಲ್ಲಿರುವುದರಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದು.