ಹಕೀಂ ಕರಂ ಹುಸೇನ್ ಮ್ಯೂಸಿಯಂ ಅಲೀಗಢದ ಮುಖ್ಯ ಶೈಕ್ಷಣಿಕ ಆಕರ್ಷಣೆಗಳಲ್ಲಿ ಒಂದು. ಇದು ತನ್ನ ವಿಶಾಲತೆ ಮತ್ತು ವೈವಿಧ್ಯಮಯತೆಗೆ ಹೆಸರಾಗಿದೆ. ಇಲ್ಲಿ ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಕಾಣಬಹುದು. ಇಲ್ಲಿ ಹಸ್ತಪ್ರತಿಗಳು, ವೈದ್ಯರು ಮತ್ತು ನೊಬೆಲ್ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದ ವಸ್ತು ವಿಷಯಗಳ ವ್ಯಾಪಕ ಸಂಗ್ರಹವಿದೆ.
ಇಲ್ಲಿರುವ ಹಲವು ಶಿಲ್ಪಗಳು ವಿವಿಧ ಕಾಲಘಟ್ಟಗಳಿಗೆ ಅಂದರೆ ಮೆಸಪೊಟೆಮಿಯ, ಈಜಿಪ್ಟ್, ಬಾಬಿಲೊನಿಯನ್ ಮತ್ತು ಅರಬ್ ನಾಗರೀಕತೆಗಳಿಗೆ ಸಂಬಂಧಿಸಿದವು. ಈ ಸಂಗ್ರಹಾಲಯವು ಇತಿಹಾಸಕಾರರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.