ಈ ಬೀಚ್ ಗೆ ಅಲಿಬಾಗ್ ಪಟ್ಟಣದ ಹೆಸರನ್ನೇ ಇಡಲಾಗಿದೆ. ಅಲಿಬಾಗ್ ಪಟ್ಟಣಕ್ಕೆ ಭೇಟಿ ನೀಡಿದರೆ ನೋಡಲೆ ಬೇಕಾದಂತಹ ಸ್ಥಳ ಈ ಕಡಲ ತೀರ. ಇಲ್ಲಿಂದ ಕೊಲಾಬಾ ಕೋಟೆಯನ್ನು ಸುಲಭವಾಗಿ ನೋಡಬಹುದು. ಇಲ್ಲಿ ಅಪಾರವಾಗಿ ಕಪ್ಪು ಮರಳನ್ನು ಕಾಣಬಹುದು. ಇತರ ಬೀಚ್ ಗಳಂತೆಯೆ ಇಲ್ಲಿಯೂ ಆಹಾರ ಮಳಿಗೆಗಳಿದ್ದು ಪ್ರವಾಸಿಗರು ಬಯಸುವ ಸ್ಥಳೀಯ ತ್ವರಿತ ತಿನಿಸುಗಳು ಇಲ್ಲಿ ಲಭ್ಯ. ಅಲ್ಲದೆ ಇಲ್ಲಿನ ವಿಶೇಷವಾದ ಎಳೆನೀರು (ತೆಂಗಿನ ನೀರು) ಸೂರ್ಯಾಸ್ತವನ್ನು ನೋಡುತ್ತಾ ಸೇವಿಸುತ್ತಿದ್ದರೆ ಆ ಅನುಭವವೇ ಬೇರೆ !