ರಾಣಿ ಮಹಲ್, ತಾರಾಗಢ ಕೋಟೆಯ ಒಳಗೆ ಇದೆ. ಇದನ್ನು ಆಜ್ಮೇರದ ರಾಜರು ತಮ್ಮ ಪತ್ನಿಯರು ಮತ್ತು ಉಪಪತ್ನಿಯರಿಗೆಂದು ಕಟ್ಟಿಸಲಾಗಿತ್ತು. ಸದ್ಯ ಇಲ್ಲಿನ ಕುಂದಿದ ಕಲಾಕೃತಿಗಳು ಮತ್ತು ಒಡೆದ ಕಿಟಕಿಗಳು, ಆ ಕಾಲದ ರಾಜಸ್ತಾನಿ ಶೈಲಿಯ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ರಾಣಿ ಮಹಲ್ನಲ್ಲಿ ನಿಂತು ನೋಡಿದರೆ ಸುತ್ತಲಿನ ಅರಾವಳಿ ಪರ್ವತಗಳ ದೃಶ್ಯವು ನಯನಮನೋಹರವಾಗಿ ಕಾಣುತ್ತದೆ.