Search
  • Follow NativePlanet
Share

ಐಜಾಲ್ : ಎತ್ತರದಲ್ಲಿರುವ ಸುಂದರ ಪ್ರದೇಶ

17

ಭಾರತ ದೇಶದ ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿ ಒಂದಾದ ಮಿಜೋರಾಮ್ ರಾಜ್ಯಕ್ಕೆ ಐಜಾಲ್ ರಾಜಧಾನಿ. ಬೆಟ್ಟ, ಕಣಿವೆ, ಇಳಿಜಾರು ಪ್ರದೇಶದ ಮೇಲೆ ಸುಂದರವಾದ ಐಜಾಲ್ ನಗರ ಆವರಿಸಿದೆ. ಒಂದು ಶತಮಾನ ಹಳೆಯ ಇತಿಹಾಸ ಹೊಂದಿರುವ ಈ ರಾಜಧಾನಿ ನಗರ ಸಮುದ್ರ ಮಟ್ಟದಿಂದ ಸುಮಾರು 1132 ಮೀಟರ್ ಎತ್ತರದಲ್ಲಿದೆ. ಈ ನಗರದ ಉತ್ತರ ಭಾಗಕ್ಕೆ ದುರ್ತಲಾಂಗ್ ಶಿಖರವಿದೆ. ಈ ನಗರದಲ್ಲಿ ಹರಿಯುವ ತ್ಲಾಂಗ್ ನದಿ ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಹಲವಾರು ಬಹುಮಹಡಿ ಕಟ್ಟಡಗಳನ್ನೊಳಗೊಂಡ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ತೀರ ಅಗತ್ಯವಾಗಿದೆ.

ಮಿಜೋಗಳ ಭೂಮಿ

ಮಿಜೋ ಎಂದರೆ ಎತ್ತರ ಪ್ರದೇಶಗಳ ಪ್ರಸ್ಥಭೂಮಿ ಎಂದರ್ಥ. ಮಿಜೋರಾಮ್ ಎಂದರೆ ಮಿಜೋಗಳ ಪ್ರದೇಶ. ದೇಶದಲ್ಲಿ ಅತಿ ಚಿಕ್ಕ ರಾಜ್ಯವೆನಿಸಿರುವ ಮಿಜೋರಾಮ್ ಅಂತಾರಾಷ್ಟ್ರೀಯ ಗಡಿರೇಖೆಯನ್ನು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳ ಜೊತೆ ಹಂಚಿಕೊಂಡಿದೆ. ಅಂತಾರಾಜ್ಯ ಗಡಿಭಾಗವನ್ನು ಅಸ್ಸಾಂ, ತ್ರಿಪುರ ಮತ್ತು ಮಣಿಪುರಗಳ ಜೊತೆ ಹಂಚಿಕೊಂಡಿದೆ. ಮೊದಲಿಗೆ ಕೇಂದ್ರಾಡಳಿತ ಪ್ರದೇಶವಾಗಿದ್ದ ಇದನ್ನು 1987ರಲ್ಲಿ ಸ್ವತಂತ್ರ ರಾಜ್ಯವನ್ನಾಗಿ ಮಾಡಲಾಯಿತು. ಮಿಜೋಗಳು ಮೂಲತಃ ಮಂಗೋಲಿಯನ್ ಆಗಿದ್ದು, ಅನೇಕ ಶತಮಾನಗಳಿಂದ ಈ ಬೆಟ್ಟಗಳ ಪ್ರದೇಶದಲ್ಲಿ ವಾಸವಿದ್ದಾರೆ.

ಮಿಜೋಗಳ ಸಂಸ್ಕೃತಿ ಮತ್ತು ಸಂಪ್ರದಾಯ

ಸಾಂಪ್ರದಾಯಿಕವಾಗಿ ಮಿಜೋಗಳು ಕೃಷಿಕರ ಸಮಾಜದಲ್ಲಿ ಜೀವಿಸುವುದರಿಂದ ಅವರ ಅನೇಕ ಸಾಂಸ್ಕೃತಿಕ ಆಚರಣೆಗಳು ಸುಗ್ಗಿ ಮತ್ತು ಕೃಷಿ ಚಟುವಟಿಕೆಗಳ ಸುತ್ತ ಸುತ್ತಿಕೊಂಡಿವೆ. ಅನೇಕ ಶತಮಾನಗಳವರೆಗೂ ಮಿಜೋಗಳು ಅರಣ್ಯಪ್ರದೇಶವನ್ನು ಕಟಾವು ಮಾಡಿ ಸುಟ್ಟ ಜಾಗದಲ್ಲಿ ವ್ಯವಸಾಯ ಮಾಡುವ ಒಂದು ವಿಶಿಷ್ಟಬಗೆಯ ಝುಮ್ ವ್ಯವಸಾಯ ಪದ್ಧತಿಯನ್ನು ಪಾಲಿಸುತ್ತಿದ್ದರು. ಮಿಮ್ ಕುಟ್ ಮತ್ತು ಪಾಲ್ ಕುಟ್ ಮಿಜೋಗಳ ಎರಡು ಮುಖ್ಯ ಸುಗ್ಗಿಯಾಗಿದ್ದು, ಆಗಸ್ಟ್-ಸೆಪ್ಟೆಂಬರ್ ಮತ್ತು ಡಿಸೆಂಬರ್-ಜನವರಿ ತಿಂಗಳಲ್ಲಿ ಕ್ರಮವಾಗಿ ಆಚರಿಸಲಾಗುತ್ತದೆ. ಮಿಜೋಗಳು ಚೇರಾವ್ ನೃತ್ಯಕ್ಕೆ (ಬಾಂಬೂ ಬಳಸಿ ಮಾಡುವ ಲಯಬದ್ಧ ನರ್ತನ) ಪ್ರಸಿದ್ಧಿಪಡೆದಿದ್ದಾರೆ. ಇಂಥ ವಿಭಿನ್ನ ಸಂಸ್ಕೃತಿಯನ್ನೊಳಗೊಂಡ ಐಜಾಲ್ ಪ್ರವಾಸೋದ್ಯಮ ಸಂವೇದನಾಶೀಲ ಪ್ರವಾಸಿಗನಲ್ಲಿ ಆಸಕ್ತಿ ಕೆರಳಿಸುತ್ತದೆ.

ಐಜಾಲ್ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಎತ್ತರದಲ್ಲಿರುವ ಐಜಾಲ್ ನಗರದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಐಜಾಲ್ ಪ್ರವಾಸೋದ್ಯಮ ಅಭಿವೃದ್ಧಿಯ ಪ್ರಥಮ ಹಂತದಲ್ಲಿದ್ದರೂ, ಕುತೂಹಲ ಕೆರಳಿಸುವ ಅನೇಕ ಸ್ಥಳಗಳು ಅನ್ವೇಷಣೆಗೆ ಗಮ್ಯಸ್ಥಾನವಾಗಿವೆ. ಉಕ್ಕಿ ಹರಿಯುವ ತ್ಲಾಂಗ್ ನದಿಗೆ ಭೇಟಿ ಕೊಡದಿದ್ದರೆ ಐಜಾಲ್ ಪ್ರವಾಸ ಕೈಗೊಂಡಿರುವುದು ಅಪೂರ್ಣವಾಗುತ್ತದೆ. ಆ ನದಿ ಕಣಿವೆಗಳ ಕೆಳಭಾಗಕ್ಕೆ ಹರಿದು ನಗರದ ಪಶ್ಚಿಮ ಭಾಗದ ಗುಂಟ ಹರಿಯುತ್ತದೆ. ಪೂರ್ವ ಭಾಗದಲ್ಲಿ ಹರಿಯುವ ಟ್ಯೂರಿಯಲ್ ನದಿ ನಗರದ ಸೌಂದರ್ಯವನ್ನು ಅಷ್ಟೇ ವರ್ಧಿಸಿದೆ. ಟಾಮ್ ಡಿಲ್ ಸರೋವರದಲ್ಲಿನ ದೋಣಿ ವಿಹಾರ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಇದು ನಗರದಿಂದ ಬಹಳ ದೂರದಲ್ಲೇನು ಇಲ್ಲ. ಮೀನುಗಾರಿಕೆಯನ್ನು ಇಷ್ಟಪಡುವವರಿಗೆ ಸೈಹಾದಲ್ಲಿರುವ ಚಿಮ್ಟುಯ್ ಪುಯ್ ನದಿ ಅತ್ಯಂತ ಪರ್ಫೆಕ್ಟ್ ತಾಣ. ಸುಮಾರು 750 ಅಡಿ ಎತ್ತರದಿಂದ ಧುಮುಕುವ ವಾಂಟಾವಾಂಗ್ ಜಲಪಾತ ಮಿಜೋರಾಮ್ ನ ಅತ್ಯಂತ ದೊಡ್ಡ ಜಲಪಾತವೆನಿಸಿದೆ. ಅತಿ ಎತ್ತರದ ಶಿಖರವೆಂದರೆ ಫಾಂಗ್ ಪುಯ್ ಶಿಖರ. ಇದು ಆರ್ಕಿಡ್, ರೋಡೋಡೆಂಡ್ರಾನ್ಸ್, ಪರ್ವತ ಆಡು ಮತ್ತು ಚಿಟ್ಟೆಗಳಿಗೆ ಪ್ರಸಿದ್ಧಿ ಪಡೆದಿದೆ.

ಐಜಾಲ್ ರಾಜ್ಯದ ರಾಜಧಾನಿಯಾಗಿ ಮಾತ್ರವಲ್ಲ ರಾಜ್ಯದ ಸಾಂಸ್ಕೃತಿಕ ಕೇಂದ್ರವಾಗಿಯೂ ಕೆಲಸ ಮಾಡುತ್ತದೆ. ಐಜಾಲ್ ಪ್ರವಾಸದ ಪ್ರಮುಖ ಆಕರ್ಷಣೆಗಳೆಂದರೆ, ಮಿಜೋರಾಮ್ ರಾಜ್ಯ ಮ್ಯೂಸಿಯಂ, ಸೋಲೋಮನ್ ಮಂದಿರ, ಐಜಾಲ್ ನ ಅವಳಿ ಕೆರೆಗಳಾದ ರಂಗಡಿಲ್ ಕೆರೆ ಮುಂತಾದವು. ಐಜಾಲ್ ನ ಸಮೀಪದಲ್ಲಿರುವ ರೀಕ್ ಎಂಬ ಸಣ್ಣ ಸಾಂಸ್ಕೃತಿಕ ಗ್ರಾಮ ಬಹಳ ಜನಪ್ರಿಯತೆ ಗಳಿಸಿದೆ. ಏಕೆಂದರೆ, ಇಲ್ಲಿ ವಿಶಿಷ್ಟ ರೀತಿಯಲ್ಲಿ ಮಿಜೋಗಳು ಕಟ್ಟಿದ ಗುಡಿಸಲುಗಳನ್ನು ಕಾಣಬಹುದು. ಹಳ್ಳಿಯ ಅಂಚಿನಲ್ಲಿ ದೊಡ್ಡ ಬಂಡೆಗಳು ನೈಸರ್ಗಿಕ ಅರಣ್ಯಗಳನ್ನು ಹಳ್ಳಿಯ ಬದಿಯಲ್ಲಿ ಕಾಣಬಹುದು.

ಐಜಾಲ್ ತಲುಪುವ ಬಗೆ

ಕೋಲ್ಕತಾ ಮತ್ತು ಗುವಾಹಾಟಿಯಿಂದ ಪ್ರತಿನಿತ್ಯ ವಿಮಾನಗಳು ಈ ನಗರಕ್ಕೆ ಹಾರಾಡುತ್ತವೆ ಮತ್ತು ಇವೆರಡೂ ದೊಡ್ಡ ನಗರಗಳು ಭಾರತದ ಉಳಿದ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿವೆ. ಇನ್ನು ಹತ್ತಿರದ ರೈಲು ನಿಲ್ದಾಣವೆಂದರೆ, ಸುಮಾರು 184 ಕಿ.ಮೀ. ದೂರದಲ್ಲಿರುವ ಸಿಲ್ಚಾರ್ ರೈಲು ನಿಲ್ದಾಣ. ರಾಜ್ಯದ ರಾಜಧಾನಿಯಿಂದ ದೇಶದ ಉಳಿದ ಭಾಗಗಳಿಗೆ ರಾಷ್ಟ್ರೀಯ ಹೆದ್ದಾರಿ 54 ಸಂಪರ್ಕ ಒದಗಿಸಿಕೊಡುತ್ತದೆ.

ಐಜಾಲ್ ಹವಾಮಾನ

ಬೇಸಿಗೆ ಮತ್ತು ಚಳಿಗಾಲಗಳು ಹಿತಕರ ವಾತಾವರಣವನ್ನು ಸೃಷ್ಟಿಸಿರುತ್ತವೆ. ಇದು ಸೌಮ್ಯವಾದ ಮತ್ತು ಸಮಶೀತೋಷ್ಣವಾದ ಉಷ್ಣಾಂಶವನ್ನು ಹೊಂದಿರುತ್ತದೆ. ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಉಷ್ಣಾಂಶ 20 ಡಿಗ್ರಿಯಿಂದ 29 ಡಿಗ್ರಿವರೆಗೆ ಇರುತ್ತದೆ. ಇನ್ನು ಚಳಿಗಾಲದಲ್ಲಿ ಉಷ್ಣಾಂಶ 7 ಡಿಗ್ರಿವರೆಗೆ ಇಳಿದಿರುತ್ತದೆ. ಪ್ರತಿವರ್ಷ ಸುಮಾರು 254 ಸೆಂ.ಮೀ. ಮಳೆಯನ್ನು ಐಜಾಲ್ ನಗರ ಪಡೆಯುತ್ತದೆ.

ಐಜಾಲ್ ಪ್ರಸಿದ್ಧವಾಗಿದೆ

ಐಜಾಲ್ ಹವಾಮಾನ

ಉತ್ತಮ ಸಮಯ ಐಜಾಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಐಜಾಲ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 54 ಐಜಾಲ್ ಮತ್ತು ದೇಶದ ಉಳಿದ ಭಾಗಗಳಿಗೆ ಉತ್ತಮ ರಸ್ತೆ ಸಂಪರ್ಕವಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ಸಿಲ್ಚಾರ್ ಮಾರ್ಗವಾಗಿ ಐಜಾಲ್ ತಲುಪುತ್ತದೆ. ಅಲ್ಲಿಂದ ಮುಂದೆ ಶಿಲ್ಲಾಂಗ್ ಗೆ ಮತ್ತು ಗುವಾಹಾಟಿಗೆ ಉತ್ತಮ ಸಂಪರ್ಕ ಕೊಂಡಿಯಾಗಿದೆ. ಶಿಲ್ಲಾಂಗ್ ಮತ್ತು ಸಿಲ್ಚಾರ್ ನಿಂದ ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಲಭ್ಯವಿವೆ. ಇದರ ಜೊತೆಗೆ ಖಾಸಗಿ ವಾಹನಗಳು, ಟಾಟಾ ಸುಮೋಗಳು ಈ ಮಾರ್ಗದಲ್ಲಿ ಹೇರಳವಾಗಿ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಐಜಾಲ್ ನಿಂದ ಸುಮಾರ್ 184 ಕಿ.ಮೀ. ದೂರದಲ್ಲಿರುವ ಸಿಲ್ಟಾರ್ (ದಕ್ಷಿಣ ಅಸ್ಸಾಂ) ರೈಲು ನಿಲ್ದಾಣವೇ ಹತ್ತಿರದ ನಿಲ್ದಾಣವಾಗಿದೆ. ಸಿಲ್ಚಾರ್ ನಿಂದ ಲುಮ್ ಡಿಂಗ್ ಮಾರ್ಗವಾಗಿ ಗುವಾಹಾಟಿ ತಲುಪಲು ರೈಲುಗಳಿವೆ. ಸಿಲ್ಟಾರ್ ನಿಂದ ಐಜಾಲ್ ಗೆ ಉತ್ತಮ ಸಾರಿಗೆ ವ್ಯವಸ್ಥೆ ಕೂಡ ಇದೆ. ಪ್ರವಾಸಿಗರು ಖಾಸಗಿ ವಾಹನಗಳನ್ನು ಬುಕ್ ಮಾಡಿ ಐಜಾಲ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಐಜಾಲ್ ನಗರ ತನ್ನದೇ ಆದ ಸ್ಥಳೀಯ ಲೆಂಗ್ ಪುಯ್ ವಿಮಾನ ನಿಲ್ದಾಣವನ್ನು ಹೊಂದಿದೆ. ಇಲ್ಲಿಂದ ಪ್ರತಿನಿತ್ಯ ಕೋಲ್ಕತಾ ಮತ್ತು ಗುವಾಹಾಟಿಗೆ ವಿಮಾನಗಳು ಹಾರಾಡುತ್ತವೆ. ಐಜಾಲ್ ನಿಂದ ಗುವಾಹಾಟಿಗೆ ಮತ್ತು ಇತರ ಪ್ರದೇಶಗಳಿಗೆ ಇಂಡಿಯನ್ ಏರ್ ಲೈನ್ ಮತ್ತು ಇತರ ಖಾಸಗಿ ವಿಮಾನ ಸಂಸ್ಥೆಗಳು ವಿಮಾನಯಾನ ಸೇವೆಯನ್ನು ಹೊಂದಿವೆ. ನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಲೆಂಗ್ ಪುಯ್ ವಿಮಾನ ನಿಲ್ದಾಣ ನಗರ ತಲುಪಲು ಉತ್ತಮ ಸಾರಿಗೆ ವ್ಯವಸ್ಥೆಯನ್ನೂ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu