ವೆಚಾರ್ ಉಪಕರಣಗಳ ವಸ್ತು ಸಂಗ್ರಹಾಲಯ ಅಥವಾ ವಿಶಾಲ್ಲ ಎನ್ವಿರಾನ್ಮೆಂಟಲ್ ಸೆಂಟರ್ ಫಾರ್ ಹೆರಿಟೇಜ್ ಆಫ್ ಆರ್ಟ್, ಅರ್ಕಿಟೆಕ್ಚರ್ ಅಂಡ್ ರಿಸರ್ಚ್ ಸೆಂಟರ್ ಎಂಬುದು ಪ್ರಾಚೀನ ಕಾಲದಿಂದಲು ಮಾನವನ ನಾಗರೀಕತೆಯ ಅಭಿವೃದ್ಧಿಯಲ್ಲಿ ಉಪಕರಣಗಳು, ಸಾಮಾನು ಮತ್ತು ಪಾತ್ರೆ ಪಗಡೆಗಳ ಬೆಳವಣಿಗೆ ಹೇಗಾಯಿತೆಂಬುದರ ಬಗ್ಗೆ ಬೆಳಕು ಚೆಲ್ಲಲು ಸ್ಥಾಪಿಸಲಾಗಿರುವ ಒಂದು ವಸ್ತು ಸಂಗ್ರಹಾಲಯವಾಗಿದೆ. ಇದನ್ನು 1981ರಲ್ಲಿ ವಿಶಾಲ್ಲ ಹಳ್ಳಿಗೆ ಸಮೀಪದಲ್ಲಿ ಸ್ಥಾಪನೆ ಮಾಡಲಾಯಿತು. ಈ ಸಂಸ್ಥೆಯು ವಿವಿಧ ಕಾಲ ಘಟ್ಟಗಳಲ್ಲಿ ಉಂಟಾದ ಪಾತ್ರೆ ಪಗಡೆಗಳು ಹೇಗಿದ್ದವು ಎಂಬುದನ್ನು ತುಂಬಾ ವ್ಯವಸ್ಥಿತವಾಗಿ ದಾಖಲೆಗಳೊಂದಿಗೆ ಸಂಗ್ರಹಿಸಿದೆ.
ಇಲ್ಲಿ ನಾವು ಕುಂಬಳ ಕಾಯಿಯಿಂದ ಮಾಡಿದ ಜಗ್ನಿಂದ ಹಿಡಿದು ಸ್ಟೇಯಿನ್ಲೆಸ್ ಸ್ಟೀಲ್ ಪಾತ್ರೆಗಳವರೆಗೆ ಎಲ್ಲಾ ಬಗೆಯ ಪಾತ್ರೆಗಳನ್ನು ನಾವು ನೋಡಬಹುದು. ಇದರ ಜೊತೆಗೆ ಕಂಚು, ತಾಮ್ರ, ಜರ್ಮನ್ ಸಿಲ್ವರ್ ಹೀಗೆ ಹಲವು ಲೋಹದ ಪಾತ್ರೆಗಳ ವಿಪುಲವಾದ ಸಂಗ್ರಹಗಳನ್ನು ನಾವು ಗಮನಿಸಬಹುದು.