Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಮಹುಡಿ ತೀರ್ಥ್

ಮಹುಡಿ ತೀರ್ಥ್, ಅಹಮದಾಬಾದ್

1

ಮುಹುಡಿ ತೀರ್ಥವು ಜೈನರ ಅತ್ಯಂತ ಪವಿತ್ರವಾದ ತೀರ್ಥವಾಗಿದೆ. ಈ ಸ್ಥಳವನ್ನು ಮಧುಮತಿ ಎಂದು ಕರೆಯುತ್ತಿದ್ದರು. ಉತ್ಖನನದಲ್ಲಿ ದೊರೆತ ಸುಮಾರು 2000 ವರ್ಷಗಳ ಹಿಂದಿನ ಪಳೆಯುಳಿಕೆಗಳು ಇದರ ಅಸ್ತಿತ್ವವನ್ನು ಸಾರಿ ಹೇಳುತ್ತಿವೆ.

ಆಚಾರ್ಯದೇವ್ ಬುದ್ಧಿ ಸಗರ್ಸುರಿಶ್ವರ್ ಜೀಯವರು ತಮ್ಮ ತಪಸ್ಸು ಮುಗಿದ ನಂತರ ಈ ಮಂದಿರ ಕಟ್ಟಲು ಶ್ರೀಕಾರ ಹಾಕಿದರು. ಇಲ್ಲಿರುವ ವಿಗ್ರಹವು ಘಂಟಾಕರ್ಣ ಮಹಾವೀರ್ ದೇವ್‍ರವರದಾಗಿದೆ. ಇವರ ಹಿಂದಿನ ಅವತಾರವಾದ ರಾಜ ತುಂಗಭದ್ರನ ರೂಪದಲ್ಲಿಯೇ ಈ ವಿಗ್ರಹವಿದೆ. ಇದರ ಕೈಯಲ್ಲಿ ಬಿಲ್ಲು ಬಾಣಗಳು ಇರುವುದು ವಿಶೇಷ. ಈ ವಿಗ್ರಹಕ್ಕೆ ಭಕ್ತರ ಕೋರಿಕೆಯನ್ನು ಪೂರೈಸುವ ಶಕ್ತಿಯಿದೆ ಎಂದು ನಂಬಲಾಗುತ್ತದೆ. ಅದಕ್ಕಾಗಿ ದೂರದ ಊರುಗಳಿಂದ ಇಲ್ಲಿಗೆ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಭಕ್ತಾಧಿಗಳು ಇಲ್ಲಿ " ಸುಖಡಿ" ಎಂಬ ಸಿಹಿಯನ್ನು ಹಂಚುತ್ತಾರೆ, ಇದು ಇಲ್ಲಿನ ಆಚಾರ್ಯರ ನೆಚ್ಚಿನ ಸಿಹಿ ತಿಂಡಿಯಾಗಿತ್ತು.

ದೇವಾಲಯದ ಪಕ್ಕದಲ್ಲಿಯೇ 30 ಅಡಿಗಳಷ್ಟು ಎತ್ತರದ ಗಂಟೆಯನ್ನು ನಾವು ಕಾಣಬಹುದು. ಇದನ್ನು ಬಾರಿಸಲು ಭಕ್ತಾಧಿಗಳು ಮೇಲಕ್ಕೆ ಏರಿ ಹೋಗಬೇಕಾಗುತ್ತೆ. ನಂಬಿಕೆಗಳ ಪ್ರಕಾರ ಈ ಘಂಟೆಯನ್ನು ಬಾರಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗುತ್ತದೆ. ಆಚಾರ್ಯದೇವ್ ಬುದ್ಧಿ ಸಗರ್ಸುರಿಶ್ವರ್ ಜೀಯವರು ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಭಗವಾನ್ ಪದ್ಮಪ್ರಭುರವರ 22 ಇಂಚಿನ ವಿಗ್ರಹವನ್ನು ಇಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿನ ಭೂಮ್ಟಿ ಅಥವಾ 24 ತೀರ್ಥಂಕರರಿರುವ ಗುಡಿಗಳ ಸುತ್ತ ಭಕ್ತಾಧಿಗಳು ಪ್ರದಕ್ಷಿಣೆ ಹಾಕುವುದು ಒಂದು ಪದ್ದತಿಯಾಗಿದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed