Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಅಹಮದಾಬಾದ್

6

ಜಾಮ ಮಸೀದಿಯು ಮೂಲತಃ ಮಹಾರಾಜರ ಖಾಸಗಿ ಉಪಯೋಗಕ್ಕೆ ನಿರ್ಮಾಣ ಮಾಡಲ್ಪಟ್ಟ ಮಸೀದಿಯಾಗಿದೆ. ಇದನ್ನು ಒಂದನೆ ಸುಲ್ತಾನ್ ಅಹಮದ್ ಶಾರವರ ಆಡಳಿತಾವಧಿಯಲ್ಲಿ, ಅಂದರೆ 1423ರಲ್ಲಿ ನಿರ್ಮಾಣ ಮಾಡಲಾಯಿತು. ಇದನ್ನು ಸ್ವತಃ ಅವರೆ ಉದ್ಘಾಟನೆ ಮಾಡಿದರು. ಕೆಂಪು ಮರಳುಗಲ್ಲಿನಿಂದ ನಿರ್ಮಾಣ ಮಾಡಲಾಗಿರುವ ಕಟ್ಟಡದ ಸಭಾಂಗಣವು ಅಮೃತಶಿಲೆಯಿಂದ ನಿರ್ಮಾಣ ಮಾಡಲಾಗಿದೆ.

ಅರೇಬಿಕ್ ಭಾಷೆಯಲ್ಲಿ ಕೆಲವು ಸ್ತುತಿಗಳನ್ನು ಬರೆಯಲ್ಪಟ್ಟಿರುವ ಕಂಬಗಳಿಂದ ಸುತ್ತುವರೆದಿರುವ ಈ ಮಸೀದಿಯಲ್ಲಿ ಎರಡು ಮಿನಾರುಗಳು ಪ್ರವೇಶದ್ವಾರದಲ್ಲಿ ನೆಲೆಗೊಂಡಿದ್ದವು. ಆದರೆ ಇವು 1819ರಲ್ಲಿ ಉಂಟಾದ ಭಯಾನಕ ಭೂಕಂಪದಲ್ಲಿ ನಾಶವಾದವು. ಇಲ್ಲಿನ ಪ್ರಾರ್ಥನಾಂಗಣದಲ್ಲಿ 260 ಕಂಬಗಳಿವೆ, ಇವು ಅವುಗಳ ಮೇಲೆ ಇರುವ 15 ಗುಮ್ಮಟಗಳಿಗೆ ಆಸರೆಯನ್ನು ನೀಡಿವೆ.

ಈ ಮಸೀದಿಯ ಗೋಡೆಗಳ ಮೇಲೆ ಹಲವಾರು ಜೈನ ಮತ್ತು ಹಿಂದೂ ಸುಭಾಷಿತಗಳನ್ನು ಹೊಂದಿದೆ. ಈ ಮಸೀದಿಯಲ್ಲಿನ ಪ್ರಧಾನ ಗುಮ್ಮಟವು ಜೈನರ ದೇಗುಲಗಳಲ್ಲಿರುವಂತೆ ಕಮಲದಾಕಾರದಲ್ಲಿದೆ. ಇಲ್ಲಿನ ಕೆಲವು ಕಂಬಗಳಲ್ಲಿ ಹಿಂದೂ ದೇವಾಲಯಗಳಲ್ಲಿರುವಂತೆ ಘಂಟೆಯ ರಚನೆಗಳಿವೆ. ಇವಿಷ್ಟೇ ಅಲ್ಲದೆ ಒಂದು ಕಿಟಕಿಯ ಮೇಲೆ " ಓಂ" ಎಂಬ ಕೆತ್ತನೆಯನ್ನು ಸಹ ನಾವು ಕಾಣಬಹುದು. ಇದರ ಒಳಗೆ ಯಾರು ಬೇಕಾದರು ಎಲ್ಲಾ ದ್ವಾರಗಳ ಮೂಲಕವು ಪ್ರವೇಶಿಸಬಹುದು. ಆದರೆ ಒಳಗೆ ಪ್ರವೇಶಿಸಿದ ನಂತರ ನಿಶ್ಶಬ್ದತೆಯನ್ನು ಪಾಲಿಸುವುದು ಕಡ್ಡಾಯ. ಈ ಮಸೀದಿಯ ಒಳಗೆ ಪ್ರಾರ್ಥನೆಯ ಸಮಯದಲ್ಲೂ ಪ್ರವೇಶಿಸಬಹುದು. ಆದರೆ ಅವರು ತಲೆಗೆ ಏನಾದರು ಬಟ್ಟೆಯನ್ನು ಸುತ್ತಿಕೊಂಡಿರಬೇಕು. ಮಹಿಳೆಯರಿಗೆ ಪ್ರಧಾನ ಹಾಲ್‍ಗೆ ಪ್ರವೇಶವನ್ನು ನಿಷಿದ್ಧಗೊಳಿಸಲಾಗಿದೆ.

ಅಹಮದ್‍ಶಾ, ಹಾಗು ಅವನ ಮಗ ಮತ್ತು ಅವನ ಮೊಮ್ಮಗನ ಗೋರಿಗಳನ್ನು ಈ ಮಸೀದಿಯ ಪಶ್ಚಿಮ ದಿಕ್ಕಿಗೆ ಕಟ್ಟಿದ್ದಾರೆ. ಇದಲ್ಲದೆ ಇಲ್ಲಿ ಕ್ವೀಡ್ ಮತ್ತಿತರ ಸತಿಯರ ಸಮಾಧಿಗಳನ್ನು ಸಹ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat