ಸೆಂಟರ್ ಎನ್ವಿರಾನ್ಮೆಂಟಲ್ ಪ್ಲಾನ್ನಿಂಗ್ ಅಂಡ್ ಟೆಕ್ನಾಲಜಿ ಕ್ಯಾಂಪಸ್ ಅನ್ನು 1962ರಲ್ಲಿ ಬಿ.ವಿ ದೋಷಿಯವರು ಸ್ಥಾಪಿಸಿದರು. ಸ್ವಾಯತ್ತತ್ತೆಯನ್ನು ಹೊಂದಿರುವ ವಿಶ್ವವಿದ್ಯಾನಿಲಯವಾಗಿರುವ ಈ ಸಂಸ್ಥೆಯು ಸ್ಕೂಲ್ ಆಫ್ ಇಂಟಿರಿಯರ್ ಡಿಸೈನ್ ಎಂಬ ಸಂಸ್ಥೆಯನ್ನು ಸಹ ತನ್ನ ಆವರಣದಲ್ಲಿ ಹೊಂದಿದೆ. ಇದನ್ನು 1991ರಲ್ಲಿ ಕೃಷ್ಣ ಶಾಸ್ತ್ರಿಯವರು ಸ್ಥಾಪಿಸಿದರು. ಇಲ್ಲಿ ಹಲವಾರು ಪದವಿ ಮತ್ತು ಪದವಿ ಪೂರ್ವ ಕೋರ್ಸ್ ಗಳನ್ನು ನಿರ್ವಹಿಸಲಾಗುತ್ತದೆ. ಛಾಯಾಗ್ರಹಣ, ಸಂಗೀತ, ಕಲೆ, ಧಾರ್ಮಿಕ, ಪ್ರಾಕೃತಿಕ ಮತ್ತು ಸಂಸ್ಕೃತಿ ವಿಚಾರದಲ್ಲಿ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವಲ್ಲಿ ಈ ಸಂಸ್ಥೆಯು ಕಾರ್ಯ ನಿರತವಾಗಿದೆ. ಮಕ್ಕಳಲ್ಲಿ ಪ್ರಯೋಗಶೀಲತೆಯನ್ನು ಬೆಳೆಸಲು ಈ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.