Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಹವಾಮಾನ

ಆಗ್ರಾ ಹವಾಮಾನ

ಆಗ್ರಾಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ನಡುವಿನ ಅವಧಿಯು ಅತ್ಯುತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಆಹ್ಲಾದಕರವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿ ಹಲವಾರು ಸಾಂಸ್ಕೃತಿಕ ಉತ್ಸವಗಳು ಜರುಗುತ್ತವೆ. 45 ಡಿಗ್ರಿ ಉಷ್ಣಾಂಶದಿಂದ ಕೂಡಿದ ಬೇಸಿಗೆಯು ಇಲ್ಲಿನ ಪರಿಸ್ಥಿತಿಯನ್ನು ಅಸಹನೀಯವಾಗಿಸುತ್ತದೆ. ಆದರೆ ತಾಜ್ ಮಹಲಿನ ಸೌಂದರ್ಯವು ಈ ಬೇಸಿಗೆಯ ಬಿಸಿಲನ್ನು ಸಹ ಮರೆಸಿಬಿಡುತ್ತದೆ. ಅದನ್ನು ನೋಡಲು ಉಷ್ಣಾಂಶವು ಅಡ್ಡಿಯೇ ಅಲ್ಲ.

ಬೇಸಿಗೆಗಾಲ

ಮಾರ್ಚ್ ನಿಂದ ಮೇವರೆಗಿನ ಅವಧಿಯು ಇಲ್ಲಿ ಬೇಸಿಗೆಯಾಗಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 45° ಸೆಲ್ಶಿಯಸ್ ತಲುಪಿರುತ್ತದೆ. ಇದರ ಜೊತೆಗೆ ಇಲ್ಲಿ ಬಿಸಿಗಾಳಿಯು ಸಹ ಬೀಸುತ್ತ ಇರುತ್ತದೆ. ಇವೆಲ್ಲವು ಸೇರಿ ಈ ಅವಧಿಯನ್ನು ಅಸಹನೀಯಗೊಳಿಸುತ್ತವೆ.

ಮಳೆಗಾಲ

ಈ ನಗರದಲ್ಲಿ ಜೂನ್‍ನಿಂದ ಆಗಸ್ಟ್ ತಿಂಗಳವರೆಗೆ ಮಳೆ ಬೀಳುತ್ತದೆ. ಮಳೆಯು ಆಗ್ರಾಗೆ ಬಿಸಿಲಿನಿಂದ ಮುಕ್ತಿ ನೀಡುತ್ತದೆಯಾದರು, ಆರ್ದ್ರತೆಯು ಏರಿಕೆಯಾಗುತ್ತದೆ.

ಚಳಿಗಾಲ

ಚಳಿಗಾಲವು ಇಲ್ಲಿ ಅಕ್ಟೋಬರ್ ನಿಂದ ಜನವರಿಯವರೆಗೆ ವಿಸ್ತರಿಸಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಹಗಲುಗಳು ಅಪ್ಯಾಯಕರವಾಗಿರುತ್ತವೆ ಮತ್ತು ರಾತ್ರಿಗಳು ಚಳಿಯಿಂದ ಕೂಡಿರುತ್ತವೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 12°ಸೆಲ್ಶಿಯಸ್‍ನಿಂದ 25° ಸೆಲ್ಶಿಯಸ್‍ವರೆಗೆ ಇರುತ್ತದೆ.