Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ತಾಜ್ ವಸ್ತು ಸಂಗ್ರಹಾಲಯ

ತಾಜ್ ವಸ್ತು ಸಂಗ್ರಹಾಲಯ, ಆಗ್ರಾ

2

ತಾಜ್ ವಸ್ತು ಸಂಗ್ರಹಾಲಯವು ಆಗ್ರಾದಲ್ಲಿರುವ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಅದರಲ್ಲಿಯೂ ಮುಖ್ಯವಾಗಿ ತಾಜ್ ಮಹಲಿನ ಬಗ್ಗೆ ಆಸಕ್ತಿ ಹೊಂದಿರುವವರು ಮತ್ತು ಸಂಶೋಧಕರು ಇಲ್ಲಿಗೆ ಹೆಚ್ಚು ಭೇಟಿ ನೀಡುತ್ತಾರೆ. ಇದನ್ನು 1982ರಲ್ಲಿ ನಿರ್ಮಿಸಲಾಯಿತು. ಈ ಕಟ್ಟಡವು ತಾಜ್ ಮಹಲ್ ಸಂಕೀರ್ಣದಲ್ಲಿರುವ ಜಲ್ ಮಹಲಿನಲ್ಲಿ ನೆಲೆಗೊಂಡಿದೆ. ಇದು ಮುಖ್ಯದ್ವಾರದ ಎಡಗಡೆಗೆ ಇದೆ. ಇದು ಎರಡು ಅಂತಸ್ತಿನ ಕಟ್ಟಡವನ್ನು ಹೊಂದಿದೆ. ಇದರಲ್ಲಿ ಮೂರು ಪ್ರದರ್ಶನಾಲಯಗಳು ಮತ್ತು ಒಂದು ಪ್ರಮುಖ ಸಭಾಂಗಣವಿದೆ.

ಈ ಸಂಗ್ರಹಾಲಯದಲ್ಲಿ ಸುಮಾರು 120 ಪ್ರದರ್ಶಕಗಳು ಇವೆ. ಇದರಲ್ಲಿ ಹಸ್ತ ಪ್ರತಿಗಳು, ಮಿನಿಯೇಚರ್ ಪೇಂಟಿಂಗ್‍ಗಳು, ರಾಜ ಶಾಸನಗಳು, ಆಯುಧಗಳು, ಉಪಕರಣಗಳು, ಅಲಂಕಾರಿಕ ವಸ್ತುಗಳು ಮತ್ತು ಆಗ್ರಾದಲ್ಲಿ ಬಳಸುತ್ತಿದ್ದ ನಾಣ್ಯಗಳ ಮಾದರಿಯನ್ನು ನಾವು ನೋಡಬಹುದು.

ಇಲ್ಲಿ ತಾಜ್ ಮಹಲಿನ ಮೂಲ ನೀಲ ನಕಾಶೆಯ ಹಸ್ತಪ್ರತಿಯನ್ನು ವೀಕ್ಷಕರು ನೋಡಬಹುದು. ಜೊತೆಗೆ ಈ ಸಮಾಧಿಯನ್ನು ನಿರ್ಮಿಸಲು ಯಾವ ವಿನ್ಯಾಸವನ್ನು ಬಳಸಲಾಯಿತು ಎಂಬ ಸವಿವರ ಚಿತ್ರಣವನ್ನು ಆಧಾರಗಳ ಸಹಿತ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಅಲ್ಲದೆ ತಾಜ್ ಹಂತ ಹಂತವಾಗಿ ಹೇಗೆ ನಿರ್ಮಾಣಗೊಂಡಿತು ಎಂಬ ದಾಖಲೆಗಳು ಸಹ ಇಲ್ಲಿವೆ.

ಇವುಗಳಲ್ಲಿ ತುಂಬಾ ಮುಖ್ಯವಾಗಿರುವುದು ಶಹ ಜಹನಿನ ಪ್ರೀತಿ ಪಾತ್ರ ಮಡದಿಯಾದ ಮುಮ್ತಾಜ್ ಮಹಲಳ ಭಾವಚಿತ್ರಗಳನ್ನು ಮರದ ಚೌಕಟ್ಟಿನಲ್ಲಿ ಹಾಕಿ ಇಟ್ಟಿರುವುದನ್ನು ಸಹ ನಾವಿಲ್ಲಿ ನೋಡಬಹುದು. ಈ ಸಂಗ್ರಹಾಲಯವು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಪ್ರವೇಶ ದರವು ಎಲ್ಲರ ಕೈಗೆಟುಕುವಂತಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri