Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಜಹಂಗಿರ್ ಮಹಲ್

ಜಹಂಗಿರ್ ಮಹಲ್, ಆಗ್ರಾ

2

ಆಗ್ರಾ ಕೋಟೆಯಲ್ಲಿ ನೆಲೆಗೊಂಡಿರುವ ಜಹಂಗಿರ್ ಮಹಲ್ 1570ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರನಿಂದ ನಿರ್ಮಿಸಲ್ಪಟ್ಟಿತು. ಈ ಮಹಲನ್ನು ಅಕ್ಬರ್ ಜನಾನ ಅರಮನೆ ಅಥವಾ ಅತಃಪುರವಾಗಿ ಬಳಸುತ್ತಿದ್ದನು. ವಿಶೇಷವಾಗಿ ಇದನ್ನು ಅಕ್ಬರನ ರಜಪೂತ ಪತ್ನಿಯರ ಸಲುವಾಗಿ ಬಳಸಲಾಗುತ್ತಿತ್ತು. ನೀವು ಕೋಟೆಗೆ ಪ್ರವೇಶಿಸುವ ಅಮರ್ ಸಿಂಗ್ ಪ್ರವೇಶ ದ್ವಾರದ ಬಲಕ್ಕೆ ಕಂಡು ಬರುವ ಮೊದಲ ಕಟ್ಟಡವೇ ಜಹಂಗಿರ್ ಮಹಲ್

ಈ ಅರಮನೆಯನ್ನು ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಇದು ಹಿಂದೂ ಮತ್ತು ಇಸ್ಲಾಮಿಕ್ ಸಮ್ಮಿಶ್ರ ಶೈಲಿಯ ಅದ್ಭುತ ವಾಸ್ತುಶಿಲ್ಪದ ಉದಾಹರಣೆಯಾಗಿ ನಿಂತಿದೆ. ಪ್ರವೇಶದ್ವಾರವು ನೇರವಾಗಿ ಸಭಾಂಗಣಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಸಭಾಂಗಣವು ಪರ್ಷಿಯನ್ ಶೈಲಿಯ ಕಲ್ಲಿನ ಕೆತ್ತನೆಗಳಿಂದ ನೋಡುಗರನ್ನು ಗಮನ ಸೆಳೆಯುತ್ತದೆ. ಅದರಲ್ಲಿಯೂ ತೊಲೆಗಳಿಗೆ ಆಧಾರವಾಗಿ ಕೆತ್ತಲಾಗಿರುವ ಆಕರ್ಷಕ ಕಂಸಗಳು ( ಬ್ರ್ಯಾಕೆಟ್) ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ.

ಈ ಅರಮನೆಗೆ ಮುಂದೆ ಜಹಂಗಿರ್ ಬದಲಾವಣೆಗಳನ್ನು ಮಾಡಿದನು. ಈ ಅರಮನೆಯಲ್ಲಿ ವೈವಿಧ್ಯಮಯವಾದ ಒಳಾಂಗಣ ಮತ್ತು ಹೊರಾಂಗಣ ಶೈಲಿಯು ಇದಕ್ಕೆ ಪುರಾವೆಯನ್ನು ಒದಗಿಸುತ್ತದೆ. ಜಹಂಗಿರ್ ಇಲ್ಲಿ ಒಂದು ವೃತ್ತಾಕಾರವಾದ ತೊಟ್ಟಿಯನ್ನು ನಿರ್ಮಿಸಿದನು. ಇದು ಜಹಂಗಿರ್ ಹೌಝ್ ಎಂದು ಕರೆಯಲ್ಪಡುತ್ತಿದೆ. ಮೊಘಲ್ ಸಾಮ್ರಾಟರ ಕಾಲದಲ್ಲಿ ಈ ಕೊಳವನ್ನು ಸುಂಗಧಭರಿತ ನೀರಿನಿಂದ ತುಂಬಿಸಲಾಗುತ್ತಿತ್ತಂತೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat