Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ದಿವಾನ್ - ಇ- ಖಾಸ್

ದಿವಾನ್ - ಇ- ಖಾಸ್, ಆಗ್ರಾ

3

ಆಗ್ರಾಕೋಟೆಯಲ್ಲಿರುವ ದಿವಾನ್- ಇ- ಆಮ್‍ನಂತೆ ದಿವಾನ್-ಇ- ಖಾಸ್ ಅನ್ನು 1635ರಲ್ಲಿ ಶಹ ಜಹಾನನು ನಿರ್ಮಿಸಿದನು. ದಿವಾನ್-ಇ-ಆಮ್ ಅನ್ನು ಸ್ಥಳೀಯ ಪ್ರೇಕ್ಷಕರಿಗಾಗಿ ನಿರ್ಮಿಸಲಾಗಿದ್ದರೆ, ದಿವಾನ್- ಇ- ಖಾಸ್ ಅನ್ನು ವಿದೇಶಿ ಪ್ರತಿನಿಧಿಗಳು, ರಾಯಭಾರಿಗಳು ಮತ್ತು ರಾಜರ ಜೊತೆಗೆ ಅತ್ಯಂತ ರಹಸ್ಯ ರಾಜಕೀಯ ಮಾತುಕತೆಗಳನ್ನಾಡಲು ಬಳಸಲಾಗುತ್ತಿತ್ತು. ಹೆಸರೇ ಸೂಚಿಸುವಂತೆ ಇದು ತೀರ ಖಾಸಾ ಕಟ್ಟಡವಾಗಿತ್ತು. ಹಾಗಾಗಿ ದಿವಾನ್ - ಇ- ಖಾಸ್ ಮೊಘಲರ ಆಳ್ವಿಕೆಯ ಕಾಲದಲ್ಲಿ ನಿಜವಾದ ಶಕ್ತಿ ಕೇಂದ್ರವಾಗಿತ್ತು.

ಇಲ್ಲಿನ ಮೇಲ್ಚಾವಡಿಯಲ್ಲಿ ಎರಡು ವೈಭವಯುತವಾದ ಸಿಂಹಾಸನಗಳಿವೆ. ಅಮೃತಶಿಲೆಯಿಂದ ಮಾಡಲಾದ ಸಿಂಹಾಸನವನ್ನು ಚಕ್ರವರ್ತಿ ಬಳಸುತ್ತಿದ್ದನು. ಕಪ್ಪು ಬಳಪದ ಕಲ್ಲಿನಿಂದ ನಿರ್ಮಿಸಲಾಗಿರುವ ಮತ್ತೊಂದು ಸಿಂಹಾಸನವನ್ನು ರಾಯಭಾರಿಗಳಿಗಾಗಿ ಮೀಸಲಾಗಿರಿಸಲಾಗಿತ್ತು. ಇಲ್ಲಿನ ಸಭಾಂಗಣವನ್ನು ಅಮೂಲ್ಯವಾದ ಹರಳುಗಳಿಂದ, ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಅಲಂಕರಿಸಲಾಗಿತ್ತು. ಇದು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದೆ.

ಈ ಸಭಾಂಗಣದ ಛಾವಣಿಯನ್ನು ಚಪ್ಪಟೆಯಾಕಾರದ ಮರದ ಹಲಗೆಗಳಿಂದ ಮುಚ್ಚಲಾಗಿದೆ. ಇದಕ್ಕೆ ಚಿನ್ನ ಮತ್ತು ಬೆಳ್ಳಿಯ ಮೆರಗನ್ನು ನೀಡಲಾಗಿದೆ. ಇದು ಸೂರ್ಯನ ಬೆಳಕನ್ನು ಪ್ರತಿಫಲಿಸಲು ನೆರವಾಗುತ್ತಿತ್ತು. ಎರಡು ಸ್ತಂಭಗಳನ್ನು ಹೊಂದಿರುವ ಪ್ರವೇಶ ದ್ವಾರದ ಮೂಲಕ ಈ ಸಭಾಂಗಣವನ್ನು ತಲುಪಬಹುದು. ಇಲ್ಲಿ ಒಂದು ಪರ್ಷಿಯನ್ ಭಾಷೆಯ ಶಾಸನವಿದೆ. ಇದು ಈ ಸಭಾಂಗಣವನ್ನು ಸ್ವರ್ಗಕ್ಕಿಂತ ಮಿಗಿಲು ಮತ್ತು ಇಲ್ಲಿನ ರಾಜ ಪ್ರತ್ಯಕ್ಷ ಸೂರ್ಯನೆಂದು ವರ್ಣಿಸಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri