Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ದಿವನ್-ಇ-ಆಮ್

ದಿವನ್-ಇ-ಆಮ್, ಆಗ್ರಾ

3

ದಿವನ್-ಇ-ಆಮ್ ಅಥವಾ ಸಾರ್ವಜನಿಕ ಸಭಾಂಗಣವನ್ನು 1631-40ರ ನಡುವೆ ಶಹಜಹನನು ನಿರ್ಮಿಸಿದನು. ಇದನ್ನು ಸಾರ್ವಜನಿಕ ಸಭೆ ಸಮಾರಂಭಗಳಿಗೆ ಮತ್ತು ರಾಜ ಪರಿವಾರದವರೊಂದಿಗೆ ಸಭೆ ನಡೆಸಲು ಬಳಸಲು ನಿರ್ಮಿಸಲಾಯಿತು. ಜೊತೆಗೆ ಈ ಸಭಾಂಗಣವನ್ನು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಸಹ ಬಳಸಲಾಗುತ್ತಿತ್ತು.

ಈ ಕಟ್ಟಡವು ಆಗ್ರಾ ಕೋಟೆಯ ಕೇಂದ್ರಭಾಗದಲ್ಲಿರುವ ನಗಿನ ಮಸೀದಿಯ ಬಳಿ ನೆಲೆಗೊಂಡಿದೆ. ಕೆಂಪು ಮರಳುಗಲ್ಲಿನಿಂದ ನಿರ್ಮಾಣಗೊಂಡಿರುವ 49 ಸ್ತಂಭಗಳ ಈ ಸಭಾಂಗಣವು ಭಾರತೀಯ ಮತ್ತು ಪರ್ಷಿಯನ್ ವಾಸ್ತುಶಿಲ್ಪ ಸಂಗಮದ ಸಮರ್ಥ ಉದಾಹರಣೆಯಾಗಿ ನಿಂತಿದೆ.

ಚಪ್ಪಟೆಯಾದ ಛಾವಣಿಯನ್ನು ಹೊಂದಿರುವ ಈ ಸಭಾಂಗಣವು 201 ಅಡಿ ಉದ್ದ ಮತ್ತು 67 ಅಡಿ ಅಗಲವನ್ನು ಹೊಂದಿದೆ. ಈ ಸಭಾಂಗಣವನ್ನು ಮೂರು ಪಾರ್ಶ್ವಗಳಾಗಿ ವಿಭಾಗಿಸಲಾಗಿದೆ. ಇದು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ತಲಾ ಒಂದೊಂದು ಪ್ರವೇಶ ದ್ವಾರವನ್ನು ಹೊಂದಿದೆ. ಸಭಾಂಗಣದ ಹೊರ ಆವರಣವು ಒಂಬತ್ತು ದೊಡ್ಡ ಕಮಾನುಗಳಿಂದ ಅಲಂಕಾರಗೊಂಡಿದೆ. ಈ ಸಭಾಂಗಣವು ಕೆಂಪು ಮರಳುಗಲ್ಲಿನಿಂದ ನಿರ್ಮಾಣಗೊಂಡಿದ್ದರು, ಬಿಳಿಯ ಕಪ್ಪೆ ಚಿಪ್ಪಿನ ಗಾರೆಯನ್ನು ಇದಕ್ಕೆ ಲೇಪಿಸಲಾಗಿದೆ. ಹಾಗಾಗಿ ನೋಡಲು ಇದು ಬಿಳಿಯ ಅಮೃತಶಿಲೆಯಂತೆ ಕಾಣುತ್ತದೆ.

ಚಚ್ಚೌಕಕಾರದ ಝರೋಕ ಮಾದರಿಯ ಕೋಣೆಯನ್ನು ಚಕ್ರವರ್ತಿ ಕುಳಿತುಕೊಳ್ಳಲು ಬಳಸಲಾಗುತ್ತಿತ್ತು. ಇದಕ್ಕೆ ಮೂರು ದ್ವಾರಗಳಿದ್ದು, ಪ್ರತಿಯೊಂದನ್ನು ಅಮೂಲ್ಯ ರತ್ನಾಭರಣಗಳಿಂದ ಅಲಂಕರಿಸಲಾಗಿತ್ತು. ಇದನ್ನು ’ತಖ್ತ್ - ಇ- ಮುರಸ್ಸ’(ಸಿಂಹಾಸನದ ಕೋಣೆ) ಎಂದು ಕರೆಯಲಾಗುತ್ತಿತ್ತು. ಮಂತ್ರಿಗಳು ಕೂರುತಿದ್ದ ಪೀಠಗಳನ್ನು ಅಮೃತ ಶಿಲೆಯಿಂದ ನಿರ್ಮಿಸಲಾಗಿತ್ತು. ಇದನ್ನು ’ಬೈಠಕ್’ ಎಂದು ಕರೆಯಲಾಗುತ್ತಿತ್ತು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun