Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಚೀನಿ ಕ ರೌಜ

ಚೀನಿ ಕ ರೌಜ, ಆಗ್ರಾ

2

ಚೀನಿ ಕ ರೌಜ ಅಥವಾ ಗೋರಿಯನ್ನು  ಬಣ್ಣ ಬಣ್ಣದ ಚೀನಿ ಹೆಂಚುಗಳಿಂದ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ. ಇದು ಕವಿ,ವಿದ್ವಾಂಸ ಮತ್ತು ಶಹ ಜಹಾನಿನ ಪ್ರಧಾನ ಮಂತ್ರಿಯಾಗಿದ್ದ ಮುಲ್ಲಾ ಶುಕ್ರುಲ್ಲ ಶಿರಾಜಿಯವರ ಕಲ್ಪನೆಯ ಕೂಸು.

ಇತ್‍ಮದ್- ಉದ್- ದೌಲಹ್ ಗೋರಿಯಿಂದ ಒಂದು ಕಿ.ಮೀ ದೂರದಲ್ಲಿ, ಯಮುನಾ ನದಿಯ ದಂಡೆಯಲ್ಲಿ ನೆಲೆಗೊಂಡಿರುವ ಇದನ್ನು 1635ರಲ್ಲಿ ನಿರ್ಮಿಸಲಾಯಿತು. ಮೆರಗು ನೀಡಲಾದ ಗಾಜಿನ ಹೆಂಚುಗಳಿಂದ ಕೂಡಿದ ಈ ಕಟ್ಟಡವು ಭಾರತದಲ್ಲಿ ನಿರ್ಮಿಸಲಾದ ಈ ಮಾದರಿಯ ಕಟ್ಟಡಗಳಲ್ಲಿ ಪ್ರಪ್ರಥಮ ಪ್ರಯತ್ನವೆಂದು ಬಣ್ಣಿಸಲಾಗಿದೆ. ಹಾಗಾಗಿ ಇದು ಭಾರತೀಯ ವಾಸ್ತುಶಿಲ್ಪದಲ್ಲಿ ಇಂಡೊ- ಪರ್ಶಿಯನ್ ಶೈಲಿಯ ಇತಿಹಾಸದಲ್ಲಿ ಹೆಗ್ಗುರುತಾಗಿ ನಿಂತಿದೆ.

ಚಚ್ಚೌಕಾಕಾರದ ಈ ಗೋರಿಯನ್ನು ಕಂದು ಬಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಗೋಡೆಗಳಿಗು ಸಹ ಬಣ್ಣ ಬಣ್ಣದ ಟೈಲ್‍ಗಳನ್ನು ಹಾಕಲಾಗಿದೆ. ಜೊತೆಗೆ ಇಸ್ಲಾಮಿನ ಶಿಲಾಶಾಸನಗಳನ್ನು ಸಹ ನಾವಿಲ್ಲಿ ನೋಡಬಹುದು.

ಈ ಗೋರಿಯ ಕೇಂದ್ರ ಭಾಗದಲ್ಲಿ ಅಷ್ಟಭುಜಾಕೃತಿಯ ಎಂಟು ಸುತ್ತಿನ ವಸಂತ ಮಂದಿರವನ್ನು ನಾವು ಕಾಣಬಹುದು. ಅಪಘಾನ್ ಶೈಲಿಯ ಗೋಳಾಕೃತಿಯ ಗೋರಿಯ ಮೇಲೆ ಇಸ್ಲಾಮಿನ ಉಲ್ಲೇಖಗಳನ್ನು ನಾವಿಲ್ಲಿ ಕಾಣಬಹುದು. ಇದು ಈ ಗೋರಿಯ ಪ್ರಧಾನ ವೈಶಿಷ್ಟ್ಯತೆಯಾಗಿದೆ. ಪ್ರಸ್ತುತ ಶಿಥಿಲಾವಸ್ತೆಯಲ್ಲಿದ್ದರು, ಈ ಗೋರಿಯು ತನ್ನ ವೈಭವವನ್ನು ವೀಕ್ಷಕರ ಮುಂದೆ ತೆರೆದಿಡುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu