ಭದ್ರಕಾಳಿ ದೇವಿಗೆ ಸಮರ್ಪಿತ ಪುಥೆಂಕವಿಲ್ ಭಗವತಿ ಮಂದಿರವು ಅಡೂರ್ ನಗರದಿಂದ 8 ಕಿ.ಮೀ. ದೂರದಲ್ಲಿದೆ. ದಂತಕಥೆಯಂತೆ ಕುರಂಪಲದ ಪಾಲಪ್ಪಲ್ಲಿಲ್ ಕುಟುಂಬದ ವ್ಯಕ್ತಿಯೊಬ್ಬರು ಈ ಮಂದಿರ ನಿರ್ಮಿಸಿದರೆನ್ನುವ ದಂತಕಥೆಯಿದೆ. ವ್ಯಕ್ತಿಯ ಭಕ್ತಿಗೆ ಮೆಚ್ಚಿದ ದೇವಿ ಆತನಿಗೆ ದೈವಿಕ ಶಕ್ತಿಯನ್ನು ನೀಡಿದೆಂಬ ದಂತಕಥೆಯಿದೆ.
ಇದರ ಬಳಿಕ ಮಂದಿರ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಮಂದಿರದಲ್ಲಿ ಭದ್ರಕಾಳಿ ದೇವರ ಮೂರ್ತಿಯಿದೆ. ಮಂದಿರದ ಗರ್ಭಗುಡಿಯಲ್ಲಿ ಎಂಟು ಕೈಗಳ ಭದ್ರಕಾಳಿ ದೇವಿಯ ಮೂರ್ತಿಯಿದೆ. ಗಣಪತಿ, ಅದವಿ, ಯಕ್ಷಿ, ಮದನ, ಮಾರುಥ, ಮೂರ್ತಿ, ಅನಮಾರುಥ ಮತ್ತು ಘನಂತಕರ್ಣನ್ ಮೂರ್ತಿಗಳು ಮಂದಿರದ ಒಳಗಡೆಯಿದೆ. ಅಡೂರ್ ನ ಸಂಸ್ಕೃತಿಯ ಇತಿಹಾಸದಲ್ಲಿ ಪುಥೆಂಕವಿಲ್ ಭಗವತಿ ಮಂದಿರವು ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ವರ್ಷವಿಡೀ ದೇವಿ ಭದ್ರಕಾಳಿ ಆಶೀರ್ವಾದ ಪಡೆಯಲು ಮಂದಿರಕ್ಕೆ ಭಾರೀ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.