ಅದಿಲಾಬಾದ್ನ ಸ್ಥಳೀಯ ಲಕ್ಷಾಂತರ ಮಂದಿಗೆ ಇದೊಂದು ಆಕರ್ಷಣೀಯ ತಾಣ. ಇವರಲ್ಲದೇ ಸಾಕಷ್ಟು ಪ್ರವಾಸಿಗರೂ ಈ ಮಹಾತ್ಮಗಾಂಧಿ ಉದ್ಯಾನಕ್ಕೆ ಬರುತ್ತಾರೆ. ವರ್ಷದ ಎಲ್ಲಾ ದಿನವೂ ಇದು ಜನರಿಂದ ಕಿಕ್ಕಿರಿದಿರುತ್ತದೆ. ಆರಾಮವಾಗಿ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಈ ಉದ್ಯಾನವನ್ನು ಜನ ಬಳಸುತ್ತಾರೆ.ನಗರ ಕೇಂದ್ರಭಾಗದಲ್ಲಿರುವ ಈ ಉದ್ಯಾನ ಅತ್ಯಾಕರ್ಷಕ ವಾತಾವರಣವನ್ನು ಹೊಂದಿದ್ದು ವಾಯು ವಿಹಾರಿಗಳಿಗೆ ಹೇಳಿ ಮಾಡಿಸಿದಂತಿದೆ.
ಇದರೊಂದಿಗೆ ಕೆಲ ಹೊತ್ತು ಆರಾಮ ಬಯಸುವವರಿಗೂ ಇದು ಉತ್ತಮ ಸ್ಥಳ. ಇಲ್ಲಿ ಸಾಕಷ್ಟು ಅಪರೂಪದ ಮರಗಳು, ಗಿಡಗಳು ಇವೆ. ಉದ್ಯಾನದ ಲಾನ್ನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಲಾನ್ನಲ್ಲಿ ಕುಳಿತು ಕೆಲ ಹೊತ್ತು ವಿಶ್ರಾಂತಿ ಪಡೆಯಲು ಸೂಕ್ತವಾದ ರೀತಿಯಲ್ಲಿ ಇದು ನಿರ್ಮಾಣವಾಗಿದೆ. ಇಲ್ಲಿನ ಸುಂದರ ಪ್ರದೇಶವನ್ನು ನೋಡುತ್ತಾ ನಿರಾಳವಾಗುವ ಅವಕಾಶ ಇಲ್ಲಿದೆ. ವಾಕಿಂಗ್ ಮಾರ್ಗದ ಜತೆ ವಿಶ್ರಾಂತಿ ಪಡೆಯಲು ಸಾಕಷ್ಟು ಬೆಂಚ್ಗಳೂ ಇಲ್ಲಿವೆ. ವಾಯು ವಿಹಾರ ಮುಗಿಸಿ ಕೆಲಹೊತ್ತು ಕೂರಲು ಇದು ಅನುಕೂಲಕರ.
ತಮ್ಮ ಅಮೂಲ್ಯ ಸಮಯವನ್ನು ಕಳೆಯಲು ಇದು ಪ್ರಶಸ್ತ ಜಾಗವನ್ನಾಗಿ ಈ ಉದ್ಯಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಸ್ಥಳೀಯ ವೃದ್ಧರು. ಇದಲ್ಲದೇ ಸ್ನೇಹಿತರು, ಕುಟುಂಬವರ್ಗದವರೊಂದಿಗೆ ಕಾಲ ಕಳೆಯಲು ಇದು ಸರಿಯಾದ ತಾಣ. ರಾತ್ರಿ 8.30 ಕ್ಕೆ ಉದ್ಯಾನದ ಬಾಗಿಲು ಮುಚ್ಚುತ್ತದೆ ಎನ್ನುವುದು ಗಮನದಲ್ಲಿರಲಿ.